ಸುರಂಗ ಕೊರೆದ ದುಷ್ಕರ್ಮಿಗಳು ರೈಲ್ವೆ ಯಾರ್ಡ್ ಗೆ ದುರಸ್ತಿಗೆ ಬರುತ್ತಿದ್ದ ರೈಲ್ವೆ ಇಂಜಿನ್ ಬಿಡಿಭಾಗ ಕದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬೆಗಸುರಯ್ ಜಿಲ್ಲೆಯ ರೈಲ್ವೆ ಯಾರ್ಡ್ ಗೆ ಸುರಂಗ ಕೊರೆದ ದುಷ್ಕರ್ಮಿಗಳು ಒಂದೊಂದೇ ಬಿಡಿ ಭಾಗಗಳಂತೆ ಇಡೀ ಡೀಸೆಲ್ ಇಂಜಿನ್ ಅನ್ನು ದೋಚಿದ್ದಾರೆ.
ರೈಲ್ವೆ ಯಾರ್ಡ್ ಗೆ ಸುರಂಗ ಕೊರೆದ ದುಷ್ಕರ್ಮಿಗಳು ದುರಸ್ಥಿಗೆ ಬರುತ್ತಿದ್ದ ರೈಲ್ವೆ ಇಂಜಿನ್ ನ ಬಿಡಿಭಾಗಗಳನ್ನು ಹಂತ ಹಂತವಾಗಿ ಇಡೀ ರೈಲನ್ನು ದೋಚಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗರ್ಹಾರ ಯಾರ್ಡ್ ನಲ್ಲಿ ಡೀಸೆಲ್ ಇಂಜಿನ್ ಅನ್ನು ಕದಿಯಲಾಗಿದೆ ಎಂದು ಬರನುಯಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಅಧಿಕಾರಿಗಳು ದೂರು ನೀಡಿದ್ದಾರೆ. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮುಜಾಫರ್ ಪುರ್ ಜಿಲ್ಲೆಯಿ ಪ್ರಭಾತ್ ನಗರದ ಸ್ಕ್ರ್ಯಾಪ್ ಗೋಡಾನ್ ನಲ್ಲಿ ರೈಲಿನ 13 ಬೋಗಿಗಳ ಬಿಡಿಭಾಗಗಳು ವಶಕ್ಕೆ ಪಡೆಯಲಾಗಿದೆ. ರೈಲಿಗೆ ಗಟ್ಟಿಯಾದ ಕಬ್ಬಿಣ ವಸ್ತುಗಳಿಂದ ತಯಾರಿಸಿದ ರೈಲಿನ ಇಂಜಿನ್ ಬಿಡಿಭಾಗಗಳು, ಚಕ್ರಗಳು ವಶಪಡಿಸಿಕೊಳ್ಳಗಿದೆ.
ಈ ಗ್ಯಾಂಗ್ ರೈಲ್ವೆ ಇಂಜಿನ್ ಮಾತ್ರವಲ್ಲ, ಸ್ಟೀಲ್ ಬ್ರಿಡ್ಜ್ ಬೋಲ್ಟ್ ತೆಗೆದು ಸ್ಟೀಲ್ ವಸ್ತುಗಳನ್ನು ಕೂಡ ದೋಚುತ್ತಿದ್ದರು. ಕಳೆದ ತಿಂಗಳಷ್ಟೇ ರೈಲ್ವೆ ಸ್ಟೀಮ್ ಇಂಜಿನ್ ಗೆ ಬಳಸುವ ಕಬ್ಬಿಣದ ವಸ್ತುಗಳನ್ನು ನಿಯಮ ಮೀರಿ ಮಾರಾಟ ಮಾಡಿದ್ದಕ್ಕೆ ಸೇವೆಯಿಂದ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


