ಭವ್ಯ ಭಾರತಕ್ಕೆ ಸಾಕ್ಷಿಯಾದ 500 ವರ್ಷಗಳ ಹಿಂದೂ ಧರ್ಮದ ಕನಸಾಗಿದ್ದ ಅಯೋಧ್ಯೆಯ ರಾಮಮಂದಿರ ಇಂದು ನನಸಾಗಿ ದೇಶದಲ್ಲೇ ಸಂಭ್ರಮ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕೊರಟಗೆರೆ ಪಟ್ಟಣದ ಪ್ರತಿ ಗಲ್ಲಿ ಗಲ್ಲಿಯಲ್ಲಿ ಮನೆ ಮನೆಯಲ್ಲಿಯೂ ರಾಮನ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಪ್ರತಿ ದೇವಸ್ಥಾನದಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಹೋಮ ಹವನಗಳನ್ನು ಮಾಡುತ್ತಾ ಭಕ್ತರು ರಾಮ ಭಜನೆ ಮಾಡಿದರು.
ಕೊರಟಗೆರೆಯ ಪಟ್ಟಣದ ಕನ್ನಿಕ ಪರಮೇಶ್ವರಿ ಸಮುದಾಯ ಭವನದಲ್ಲಿ ಹಾಗೆಯೇ ಪಟ್ಟಣದ ಎಚ್ ಎಸ್ ಆರ್ ಸರ್ಕಲ್ ನಲ್ಲಿ ಮತ್ತು ಕೆಎಸ್ ಆರ್ ಟಿಸಿ ಮುಂಭಾಗದಲ್ಲಿ ರಾಮನ ಭಾವಚಿತ್ರಗಳಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಿ ಹಬ್ಬವನ್ನು ಆಚರಿಸಲಾಯಿತು.
ಬಣ್ಣದ ಪೆನ್ಸಿಲ್ ಗಳನ್ನು ಬಳಸಿ ಲಕ್ಷ ಅಕ್ಷರದಲ್ಲಿ ರಾಮನ ಹೆಸರಿನಲ್ಲಿ ಮೂಡಿ ಬಂದ ಅಯೋಧ್ಯೆ ಹಾಗೂ ಶ್ರೀ ರಾಮನ ಭಾವಚಿತ್ರ ವಿಶೇಷವಾಗಿ ಗಮನ ಸೆಳೆಯಿತು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


