ಅಯೋಧ್ಯಾ: ಭಾರತೀಯ ಹಿಂದುಗಳ ಬಹುನಿರಿಕ್ಷಿತ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ. ಮಂದಿರದಲ್ಲಿ ಪ್ರತಿಷ್ಟಾಪಿಸಲಿರುವ ಶ್ರೀರಾಮ ಮತ್ತು ಸೀತೆಯ ಮೂರ್ತಿ ಪ್ರತಿಷ್ಠಾಪನೆಗೆ ನೇಪಾಳದ ಕಾಳಿಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯನ್ನು ಬಳಸಿಕೊಳ್ಳಲಾಗುತ್ತಿದೆ.
ತಲಾ 25 ಮತ್ತು 15 ಟನ್ ತೂಕವಿರುವ ಈ ಕಲ್ಲುಗಳನ್ನು ಜ.30ರಂದು ನೇಪಾಳದಿಂದ ಭಾರತಕ್ಕೆ ಕಳುಹಿಸಲಾಗಿದೆ.
ನೇಪಾಳ ಸರ್ಕಾರ ಸ್ವತಃ ಆಸಕ್ತಿ ವಹಿಸಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ. ಶ್ರೀರಾಮ ವಿಷ್ಣುವಿನ ಅವತಾರ. ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮವನ್ನು ವಿಷ್ಣುವೆಂದೇ ಭಾವಿಸಿ ಪೂಜಿಸಲಾಗುತ್ತದೆ. ಹೀಗಾಗಿ ಈ ನದಿಯ ಶಿಲೆಯನ್ನು ಬಳಸಲು ನಿರ್ಧರಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


