ರಾಮನವಮಿ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟಗಳು ನಡಿಸಿದ ಪರಿಣಾಮ ಉಂಟಾದ ಗಲಭೆಯಲ್ಲಿ ಕೆಲವು ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿಲಾಗಿದ್ದು ಪರಿಸ್ಥಿತಿ ಹತೋಟಿಗೆ ತರಲು ಪೋಲೀಸರು ಕೊನೆಗೂ ಯಶಸ್ವಿಯಾಗಿ ಇಡೀ ಖಾರ್ಗೋನ್ ನಗರದಲ್ಲಿ ಕಫ್ರ್ಯೂ ವಿಸಲಾಗಿದೆ.ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಜಿಲ್ಲಾಕೇಂದ್ರದ ಬಳಿಯ ತಾಲಾಬ್ ಚೌಕ್ ಪ್ರದೇಶದಿಂದ ರಾಮನವಮಿ ಮೆರವಣಿಗೆ ಪ್ರಾರಂಭವಾದಾಗ ಕಿಡಿಗೇಡಿಗಳು ಕಲ್ಲು ಎಸೆದು ದಾಂದಲೆ ನಡೆಸಿದ್ದಾರೆ ಅಂಗಡಿಗಳಿಗೆ ಬೆಂಕಿಹಚ್ಚಿ ಭಯದ ವಾತಾವರನ ಸೃಷ್ಠಸಿದರು ಎಂದು ಉದ್ರಿಕ್ತ ಗುಂಪು ಪೋಲಿಸರ ಮೇಲೆ ಹಲ್ಲೆಗೆ ಮುಂದಾದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲೀಸರು ಅಶ್ರುವಾಯುಸೆಡಿಸಲಾಯಿತ್ತು.ಖಾರ್ಗೋನೆ ಪೋಲೀಸ್ ಅೀಧಿಕ್ಷಕ ಸಿದ್ಧಾರ್ಥ್ ಚೌಧರಿ ಮತ್ತು ಇತರ ಇಬ್ಬರು ಪೋಲೀಸ್ ಸಿಬ್ಬಂದಿ ಸೇರಿ ಹಲವು ಜನರು ಗಾಯಗೊಂಡಿದ್ದಾರೆ.
ಘಟನೆಯ ನಂತರ, ಇಡೀ ಖಾರ್ಗೋನ್ ನಗರದಲ್ಲಿ ಕಫ್ರ್ಯೂ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ .ಅನುಗ್ರಹ ಹೇಳಿದ್ದಾರೆ.ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಮಾತ್ರ ಮನೆಯಿಂದ ಹೊರಬರುವಂತೆ ನಾಗರಿಕರಿಗೆ ತಿಳಿಸಲಾಗಿದೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು. ಆಕ್ಷೇಪಾರ್ಹ ಸಂದೇಶಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವೈದ್ಯಕೀಯ ತುರ್ತು ಹೊರತುಪಡಿಸಿ ಯಾವುದೇ ತುರ್ತು ಕೆಲಸಗಳಿಗೆ ಎಸ್ಡಿಎಂ ಕಚೇರಿ, ತಹಸಿಲ್ ಕಚೇರಿ ಮತ್ತು ಕೊತ್ವಾಲಿ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ. ಏತನ್ಮಧ್ಯೆ, ಖಾರ್ಗೋನ್ ಜಿಲ್ಲಾಯ ಉಸ್ತುವಾರಿಯೂ ಆಗಿರುವ ರಾಜ್ಯ ಕೃಷಿ ಸಚಿವ ಕಮಲ್ ಪಟೇಲ್ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವಿಭಾಗೀಯ ಆಯುಕ್ತ ಪವನ್ ಶರ್ಮಾ ಮತ್ತು ಡಿಐಜಿ, ನಿರ್ಮಾ ರೇಂಜ, ತಿಲಕ್ ಸಿಂಗ್ ಕೂಡ ಪರಿಸ್ಥಿತಿಯನ್ನು ಅವಲೋಕಿಸಲು ಖಾರ್ಗೋನ್‍ಗೆ ಭೇಟಿ ನೀಡಿದ್ದಾರೆ. ಹಿಂಸಾಚಾರದ ನಂತರ ಮೆರವಣಿಗೆಯು ಮಧ್ಯದಲ್ಲಿಯೇ ಕೈಬಿಡಲಾಯಿತು ಎಂದು ಅವರು ಹೇಳಿದ್ದಾರೆ.
ವರದಿ ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy