ಶಾಲಾ ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆ ಮಾಡಲು ಸ್ವಾಮೀಜಿಗಳ ನೇತೃತ್ವದಲ್ಲಿ ನೈತಿಕ ಶಿಕ್ಷಣ ಪಠ್ಯ ಸಮಿತಿ ರಚನೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ನೈತಿಕ ಶಿಕ್ಷಣ ಪಠ್ಯ ವಿಭಾಗದಲ್ಲಿ ಭಗವದ್ಗಿತೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಕುರಿತು ರಾಜ್ಯದ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮಿತಿ ರಚನೆ ಬಗ್ಗೆ ಶಿಕ್ಷಣ ಇಲಾಖೆ ಧರ್ಮಗುರುಗಳು, ಶ್ರೀಗಳೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಮಿತಿಯಲ್ಲಿ ಸುತ್ತೂರು, ಆದಿಚುಂಚನಗಿರಿ, ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ನೈತಿಕ ಶಿಕ್ಷಣ ಪಠ್ಯ ಸಮಿತಿ ರಚನೆ ಆಗಲಿದೆ.
ಸಮಿತಿ ನೈತಿಕ ಶಿಕ್ಷಣ ಪಠ್ಯ ಹೇಗಿರಬೇಕು ಅಂತಾ ನಿರ್ಧಾರ ಮಾಡಲಿದೆ. ಯಾವ ಪಠ್ಯ ಸೇರ್ಪಡೆ ಮಾಡಬೇಕು? ಯಾರ ಪಠ್ಯ ಸೇರ್ಪಡೆ ಮಾಡಬೇಕು? ಎಂಬುದನ್ನ ನಿರ್ಧರಿಸಲಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ಯಾವ-ಯಾವ ಮಹಾ ದಾರ್ಶನಿಕ ಗ್ರಂಥಗಳು ಪಠ್ಯದಲ್ಲಿ ಸೇರ್ಪಡೆ ಮಾಡಬೇಕು ಅಂತಾ ಸಮಿತಿ ನಿರ್ಧಾರ ಮಾಡಲಿದೆ. ಪಂಚತಂತ್ರ ಕಥೆಗಳು, ದಾರ್ಶನಿಕರ ಜೀವನ ಚರಿತ್ರೆ, ಅವರು ಆಚರಿಸಿಕೊಂಡು ಬಂದ ನೈತಿಕ ಮೌಲ್ಯಗಳ ಕುರಿತು ಪಠ್ಯ ರಚನೆಯಾಗಲಿದೆ.
ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಅಗತ್ಯವಾದ ಮೌಲ್ಯಾಧಾರಿತ ನೀತಿಕಥೆಗಳನ್ನ ಪಠ್ಯದಲ್ಲಿ ಸೇರ್ಪಡೆ ಮಾಡುವುದು. ಗುರು-ಹಿರಿಯ ಭಕ್ತಿ, ಸಂಸ್ಕಾರ, ಆಚಾರ-ವಿಚಾರಗಳು, ಸತ್ಯ, ಶಾಂತಿ, ಪ್ರೀತಿ ವಿಶ್ವಾಸಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳುವ ಕಥೆಗಳು, ವ್ಯಕ್ತಿಗಳ ಜೀವನಾಧಾರಿತ ಪಠ್ಯಗಳ ಸೇರ್ಪಡೆಗೆ ಸಮಿತಿ ಅಗತ್ಯವಾದ ಕ್ರಮ ಕೈಗೊಳ್ಳಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


