ರಾಮ ರಾಜ್ಯ ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಅತಿ ಹೆಚ್ಚು ನಡೆಯುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಉತ್ತರ ಪ್ರದೇಶವುದಲ್ಲಿ ಕಳೆದ ವರ್ಷ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಅತಿ ಹೆಚ್ಚು ಹಿಂಸಾಚಾರಗಳು ನಡೆದಿದ್ದು, ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯದಲ್ಲಿ ಉತ್ತರ ಪ್ರದೇಶದ ನಂತರ ರಾಜಸ್ಥಾನ ಎರಡನೇ ಮತ್ತು ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದೆ.
ಕಳೆದ ವರ್ಷ ದೇಶದಲ್ಲಿ ದಲಿತರ ವಿರುದ್ಧ ಒಟ್ಟು 57,428 ಅಪರಾಧಗಳು ನಡೆದಿವೆ. ಇದರಲ್ಲಿ ಉತ್ತರ ಪ್ರದೇಶವೊಂದರಲ್ಲೇ 15,368 ಅಪರಾಧಗಳು ವರದಿಯಾಗಿವೆ.
ರಾಜಸ್ಥಾನ 8,752 ಅಪರಾಧಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಮಧ್ಯಪ್ರದೇಶ 7,733 ಅಪರಾಧಗಳನ್ನು ವರದಿ ಮಾಡಿದೆ. ನಾಲ್ಕನೇ ಸ್ಥಾನದಲ್ಲಿರುವ ಬಿಹಾರ 6,509 ಪ್ರಕರಣಗಳನ್ನು ವರದಿ ಮಾಡಿದೆ.
ಆದಿವಾಸಿಗಳ ಮೇಲಿನ ದೌರ್ಜನ್ಯದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಮಧ್ಯಪ್ರದೇಶದಲ್ಲಿ 2979 ಅಪರಾಧಗಳು ವರದಿಯಾಗಿವೆ, ನಂತರ ರಾಜಸ್ಥಾನ (2521) ಮತ್ತು ಒಡಿಶಾ (773) ಸ್ಥಾನಗಳಲ್ಲಿವೆ.


