ಗ್ರಾಹಕನ ಸೋಗಿನಲ್ಲಿ ರಾಪಿಡೊ ಬೈಕ್ ಕಾಯ್ದಿರಿಸಿದ್ದ ವ್ಯಕ್ತಿಯೊಬ್ಬ ಹಣ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ಸವಾರ ಮಣಿಕಂಠ, ಆಗ್ನೆಯ ವಿಭಾಗದ ಸೈಬರ್ ಕೈಂ ಠಾಣೆಗೆ ದೂರು ನೀಡಿದ್ದಾರೆ.
‘ಆಂಧ್ರಪ್ರದೇಶದ ಮಣಿಕಂಠ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಗ್ರಾಹಕ ರಣವೀರ್ ಎಂಬಾತ ವಂಚನೆ ಮಾಡಿರುವುದಾಗಿ ದೂರುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಎಂ. ಟೆಕ್ ಪದವೀಧರ ಮಣಿಕಂಠ, ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು. ಎಲ್ಲಿಯೋ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ, ರಾಪಿಡೊ ಬೈಕ್ ಟ್ಯಾಕ್ಸಿ ಸವಾರರಾಗಿ ಕೆಲಸ ಮಾಡುತ್ತಿದ್ದರು. ಜುಲೈ 27ರಂದು ರಾತ್ರಿ ಅರಕೆರೆ ಬಳಿ ಮಣಿಕಂಠ ಹೊರಟಿದ್ದರು. ಗ್ರಾಹಕ ರಣವೀರ್, ಬೈಕ್ ಟ್ಯಾಕ್ಸಿ ಕಾಯ್ದಿರಿಸಿದ್ದ. ಮಣಿಕಂಠ ಸ್ಥಳಕ್ಕೆ ಹೋಗಿದ್ದರು. ‘
‘ಮಣಿಕಂಠ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನನ್ನ ಪತ್ನಿಗೆ ಹುಷಾರಿಲ್ಲ. ಚಿಕಿತ್ಸೆ ವೆಚ್ಚ ಭರಿಸಬೇಕು. ನನ್ನ ಬಳಿ ಫೋನ್ ಪೇ ಇಲ್ಲ. ವೈದ್ಯರ ಮೊಬೈಲ್ ನಂಬರ್‌ಗೆ 7 4 ಸಾವಿರ ಹಣ ಕಳುಹಿಸಿ. ನಾನು ನಿಮಗೆ ಹಣ ಕೊಡುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ಮಣಿಕಂಠ, ಹಣ ಕಳುಹಿಸಿದ್ದರು. ನಂತರ ಆರೋಪಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


