ಭೋಪಾಲ್: ಯುವ ವೈದ್ಯೆಯೊಬ್ಬರು ಕಾಲೇಜಿನ ಹಾಸ್ಟೆಲ್ ನಲ್ಲಿ ರಾಸಾಯನಿಕ ಔಷಧಿ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭೋಪಾಲ್ನ ಸರ್ಕಾರಿ ಸ್ವಾಮ್ಯದ ಗಾಂಧಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನಲ್ಲಿ ನಡೆದಿದೆ.
ಆಕಾಂಶಾ ಮಹೇಶ್ವರಿ ಮೃತ ವೈದ್ಯೆಯಾಗಿದ್ದು, ತಲಾ 2.5 ಮಿಲಿಯ ನಾಲ್ಕು ಡೋಸ್ ಅರಿವಳಿಕೆಯನ್ನು ಚುಚ್ಚಿಕೊಂಡು ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿ ತಿಳಿಸಿದೆ.
ತನಗೆ ಮಾನಸಿಕವಾಗಿ ಬಲವಿಲ್ಲ ಮತ್ತು ಕೆಲಸದೊತ್ತಡ ತಾಳಲಾಗುತ್ತಿಲ್ಲ ಎಂದು ಸಾವಿಗೂ ಮೊದಲು ವೈದ್ಯೆ ಬರೆದಿದ್ದಾರೆನ್ನಲಾಗಿರುವ ಡೆತ್ ನೋಟ್ ಆಕೆಯ ಕೊಠಡಿಯಲ್ಲಿ ಸಿಕ್ಕಿದ್ದು, ಈ ಪತ್ರದಲ್ಲಿ ಆಕೆ ಪೋಷಕರ ಕ್ಷಮೆ ಕೇಳಿದ್ದಾಳೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


