ಮುಂಬೈ: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕಾಲಿಗೆ ಗಾಯವಾದ ಪರಿಣಾಮ ಪುಷ್ಪಾ ಶ್ರೀವಲ್ಲಿ, ರಶ್ಮಿಕಾ ಮಂದಣ್ಣ ಬೆಡ್ ರೆಸ್ಟ್ ಮಾಡುತ್ತಿದ್ದಾರೆ. ಇದೀಗ ಇನ್ ಸ್ಟಾದಲ್ಲಿ ಕಾಲಿನ ಗಾಯದ ಬಗ್ಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಜಿಮ್ ನಲ್ಲಿ ಗಾಯಗೊಂಡಿದ್ದೇನೆ. ಕೆಲ ವಾರ ಅಥವಾ ತಿಂಗಳು ವಿಶ್ರಾಂತಿಯಲ್ಲಿರುವುದಾಗಿ ರಶ್ಮಿಕಾ ತಿಳೀಸಿದ್ದಾರೆ. ಕಾಲಿನ ನೋವು ಗುಣವಾದ ತಕ್ಷಣ ಥಾಮ, ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಮರಳುತ್ತೇನೆ. ಈ ವಿಳಂಬಕ್ಕೆ ಕ್ಷಮೆಕೋರುತ್ತೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ.
ರಶ್ಮಿಕಾ ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಸಿಕಂದರ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾಜಲ್ ಅಗರ್ವಾಲ್, ರಶ್ಮಿಕಾ, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ನಟಿಸುತ್ತಿದ್ದು 2025 ರ ಈದ್ ಹಬ್ಬಕ್ಕೆ ಬಿಡುಗಡೆಯಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx