ಬಿಗ್ ಬಜೆಟ್ ಚಿತ್ರಗಳ ನಾಯಕಿಯಾಗಿ ಮಿಂಚುತ್ತಿರುವ ಕನ್ನಡ ಹುಡುಗಿ ರಶ್ಮಿಕಾ ಮಂದಣ್ಣ ಸಾಮಾಜಿಕ ಪ್ರಜ್ಞೆ ಮೆರೆದಿದ್ದು, ಎಷ್ಟು ಹಣ ಕೊಟ್ಟರೂ, ಸಿನಿಮಾವನ್ನೇ ಬಿಟ್ಟರೂ ಆ ಒಂದು ಕೆಲಸ ನಾನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಸಿನಿಮಾದಲ್ಲಿ ಧೂಮಪಾನ ಮಾಡುವ ದೃಶ್ಯದಲ್ಲಿ ನಾನು ನಟಿಸಲು ಇಷ್ಟು ಪಡುವುದಿಲ್ಲ, ಅಂತಹ ದೃಶ್ಯವನ್ನು ತೆರೆಯ ಮೇಲೆ ವಿಜ್ರಂಭಿಸಲು ಇಷ್ಟ ಪಡುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಒಂದು ವೇಳೆ ಅಂತಹ ಪಾತ್ರವನ್ನು ಎದುರಿಸುವ ಅನಿವಾರ್ಯತೆ ಎದುರಾದರೆ, ಆ ಪಾತ್ರವನ್ನು ತಿರಸ್ಕರಿಸಲು ನಾನು ಸಿದ್ಧ. ಧೂಮಪಾನ ಮಾಡದಿರುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ರಶ್ಮಿಕಾ ಹೇಳಿದ್ದಾರೆ.
ಮಹಿಳೆಯರ ಪ್ರಾಭಲ್ಯದ ಕುರಿತಾಗಿ ಏರ್ಪಡಿಲಾಗಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೋಗಿದ್ದ ವೇಳೆ ರಶ್ಮಿಕಾ ಈ ವಿಚಾರವನ್ನ ಘೋಷಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW