ನವದೆಹಲಿ: ಖ್ಯಾತ ತಂಪು ಪಾನೀಯ ಬ್ರ್ಯಾಂಡ್ ರಸ್ನಾವನ್ನು ಜನರಿಗೆ ಪರಿಚಯಿಸಿದ್ದ ರಸ್ನಾ ಸಮೂಹದ ಸಂಸ್ಥಾಪಕ ಅರೀಜ್ ಫಿರೋಜ್ ಶಾ ಖಂಬಾಟ್ ವಿಧಿವಶರಾಗಿದ್ದಾರೆ.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಅರೀಜ್ ಖಂಬಾಟ್ ಬೆನಿವೊಲೆಂಟ್ ಟ್ರಸ್ಟ್ ನ ಅಧ್ಯಕ್ಷರೂ ಆಗಿದ್ದರು. ಪಾರ್ಸಿ ಇರಾನಿ ಝಾರ್ಥೋಸ್ಟಿಸ್ ನ ವಿಶ್ವ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಅರೀಜ್ ಫಿರೋಜ್ಶಾ ಅವರು ಭಾರತೀಯ ಕೈಗಾರಿಕೆ, ಉದ್ಯಮ, ಸಾಮಾಜಿಕ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಮಾಜ ಸೇವೆಯ ಮೂಲಕವೂ ಪ್ರಸಿದ್ಧರಾಗಿದ್ದರು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz