ಗದಗ: ಜಯ ಕರ್ನಾಟಕ ಸಂಘಟನೆಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ. ಲಕ್ಷ್ಮೇಶ್ವರ ಪಟ್ಟಣದಿಂದ ಗದಗ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು , ಕೂಡಲೇ ರಸ್ತೆ ನವೀಕರಣಗೊಳಿಸಬೇಕೆಂದು ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಸ್ಮಾಯಿಲ್ ಆಡೂರ ಅವರ ನೇತೃತ್ವದಲ್ಲಿ ಪಟ್ಟಣದ ಶಿಗ್ಲಿ ನಾಕಾದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಾದ ಡಿ.ಬಿ. ನರೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷ ಇಸ್ಮಾಯಿಲ ಆಡೂರ, ಲಕ್ಷ್ಮೇಶ್ವರ ದಿಂದ ಗದಗ ಹೋಗುವ ಮಾರ್ಗದ ರಸ್ತೆಯು ತಗ್ಗು ಗುಂಡಿಗಳು ಬಿದ್ದು ವಾಹನ ಸವಾರರು ಹರಸಾಹಸ ದಿಂದ ಸಂಚರಿಸುವ ಪರಸ್ಥಿತಿ ನಿರ್ಮಾಣ ವಾಗಿದೆ. ಈ ರಸ್ತೆಯ ಮೂಲಕ ದಿನನಿತ್ಯ ನೂರಾರು ಸರಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು, ವೃದ್ಧರು, ಮಹಿಳೆಯರು ತಮ್ಮ ಕೆಲಸ ಕಾರ್ಯಗಳಿಗೆ ಗದಗ ನಗರಕ್ಕೆ ಹೋಗಿ ಬರುತ್ತಾರೆ. ಈ ರಸ್ತೆ ಸಂಪೂರ್ಣ ಹದೆಗೆಟ್ಟಿರುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳು ನಡೆಯದೇ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದರು.
ಅನೇಕ ವಾಹನ ಸವಾರರು, ಬೈಕ್ ಮತ್ತು ಇತರೆ ವಾಹನಗಳು ಅಪಘಾತಕ್ಕೀಡಾದ ಸಾಕಷ್ಟು ಉದಾಹರಣೆಗಳಿವೆ. ಹೀಗಿದ್ದರು ಕೂಡ ಜಿಲ್ಲೆಯ ಲೋಕೋಪಯೋಗಿ ಸಚಿವರಾದ ಸಿ .ಸಿ.ಪಾಟೀಲ್, ಅಧಿಕಾರಿಗಳು, ಶಾಸಕರು ಹಾಗೂ ಸಂಸದರು ಈ ರಸ್ತೆಯನ್ನು ನವಿಕರಣಗೊಳಿಸಲಿಕ್ಕೆ ಮುಂದಾಗದೆ ಜಾಣ ಕುರುಡುತನ ತೋರುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿ 7 ದಿನದಲ್ಲಿ ಸ್ಪಂದನೆ ಮಾಡದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರಸ್ತೆ ಬಂದ್ ಮಾಡುವುದರ ಮೂಲಕ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಪ್ರಧಾನಕಾರ್ಯದರ್ಶಿ ರಮೇಶ ಲಮಾಣಿ, ಉಪಾಧ್ಯಕ್ಷ ರಮೇಶ ಹಂಗನಕಟ್ಟಿ, ಸಂಘಟನಾ ಕಾರ್ಯದರ್ಶಿ ಇಶಾಕಭಾಷಾ ಹರಪನಹಳ್ಳಿ ,ರುದ್ರಗೌಡ ಪಾಟೀಲ, ಹಜರತಪಟೇಲ ಕನಕವಾಡ, ಗೌಸ ಸವಣೂರ, ಜಿಲಾನಿ ಮುಲ್ಲಾ, ಕರೀಮ ಶಿರಹಟ್ಟಿ, ಶಬೀಲ ಪಲ್ಲಿ, ಸುಲೇಮಾನ ಆಡೂರ, ನಿಜಾಮ ಚಂಗಾಪುರಿ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಎ.ಎನ್ .ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy