ದೇಶಾದ್ಯಂತ ಇಂದು ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆಗಸ್ಟ್ 29ರಂದು ಈ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನವನ್ನೇ ಕ್ರೀಡಾ ದಿನವಾಗಿ ಆಯ್ಕೆ ಮಾಡಿರುವುದಕ್ಕೆ ಒಂದು ವಿಶೇಷವಾದ ಕಾರಣವಿದೆ.
ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಏಕೆ?
ಭಾರತದ ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಅವರು ಆಗಸ್ಟ್ 29 ರಂದು ಜನಿಸಿರುವುದರಿಂದ, ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಆಗಸ್ಟ್ 29, 1905ರಂದು ಮೇಜರ್ ಧ್ಯಾನ್ ಚಂದ್ ಅಹಮದಾಬಾದ್ನಲ್ಲಿ ಜನ್ಮ ತಾಳಿದರು. ವಿಶ್ವ ಕಂಡ ಅಪರೂಪದ, ಅತ್ಯುತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಸುಮಾರು 400ಕ್ಕೂ ಅಧಿಕ ಅಂತಾರಾಷ್ಟ್ರೀಯ ಗೋಲು ಗಳಿಸಿ ವಿಶೇಷ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿದ್ದರು.
2012 ರಲ್ಲಿ ಭಾರತ ಸರ್ಕಾರ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಪರಿಚಯಿಸಿತ್ತು. ಇದು ದೇಶದಲ್ಲಿ ಕ್ರೀಡಾಭಿಮಾನಿಗಳನ್ನು ಆಕರ್ಷಿಸುತ್ತಿದೆ. ಕ್ರೀಡೆಯಿಂದಾಗುವ ಅನುಕೂಲಗಳನ್ನು ತಿಳಿಸಿ ಯುವಜನತೆಯಲ್ಲಿ ಕ್ರೀಡಾಪ್ರೇಮ ಹೆಚ್ಚಿಸುವುದೇ ಈ ದಿನದ ಉದ್ದೇಶ..
* 83: ಕಪಿಲ್ಸ್ ಡೆವಿಲ್ಸ್ ಲಾರ್ಡ್ಸ್ ಬಾಲ್ಕನಿಯಲ್ಲಿ 1983ರ
ODI ವಿಶ್ವಕಪ್ ಎತ್ತಿದ್ದ ಕಥೆಯಿದು
* ದಂಗಲ್: ಕುಸ್ತಿಪಟು, ಒಲಿಂಪಿಕ್ ಕೋಚ್ ಮಹಾವೀರ್ ಸಿಂಗ್ ಪೊಗಟ್ ಜೀವನ ಕಥೆ
* ಮೇರಿ ಕೋಮ್: ಚಾಂಪಿಯನ್ ಬಾಕ್ಸರ್ ಪಟ್ಟ ಸಂಕಷ್ಟ, ಅವಮಾನ, ತಾಯಿಯಾದ ಮೇಲೆ ವಿಶ್ವ ಚಾಂಪಿಯನ್ ಆದ ಕಥೆ ಇದರಲ್ಲಿದೆ
* MS ಧೋನಿ: ಅನ್‌ಟೋಲ್ಡ್ ಸ್ಟೋರಿ: 61 ದೇಶಗಳಲ್ಲಿ
ತೆರೆ ಕಂಡಿತ್ತು
* ಭಾಗ್ ಮಿಲ್ಕಾ ಭಾಗ್: ಖ್ಯಾತ ಅಥೀಟ್ ಮಿಲ್ಕಾಸಿಂಗ್
ಬಯೋಪಿಕ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy