ಇತ್ತೀಚಿನ ದಿನಗಳಲ್ಲಿ ಯಾವುದೇ ಶುಭ ಸಂದರ್ಭದಲ್ಲೂ ಕೇಕ್ ಕಟ್ ಮಾಡಿಸೋದು ಕಾಮನ್ ಆಗಿ ಬಿಟ್ಟಿದೆ. ಇದಲ್ಲದೇ ಕೇಕ್ ಕತ್ತರಿಸುವ ಮೊದಲು ಕೇಕ್ ಮೇಲಿ ಇಟ್ಟಿರುವ ಕ್ಯಾಂಡಲ್ ಅನ್ನು ಹಚ್ಚುತ್ತೇವೆ. ಇವುಗಳನ್ನು ಸ್ಪಾರ್ಕ್ಲಿಂಗ್ ಕ್ಯಾಂಡಲ್ಸ್ ಎಂದು ಕರೆಯಲಾಗುತ್ತದೆ. ಈ ಕ್ಯಾಂಡಲ್ಸ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬ ಸಂದೇಶವುಳ್ಳ ವೀಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವೀಡಿಯೋವನ್ನು ‘ಅಶು ಘಾಯ್’ ಹೆಸರಿನ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಭಯಾನಕ ಸಂಗತಿ ತಿಳಿದ್ರೆ ಇನ್ಮುಂದೆ ನೀವು ಕೇಕ್ ಮೇಲೆ ಸ್ಪಾರ್ಕ್ಲಿಂಗ್ ಕ್ಯಾಂಡಲ್ಸ್ ಇಡುವುದೇ ಇಲ್ಲ. ಏನಿದು ವಿಷಯ ಹೇಳ್ತೀವಿ. ಸುದ್ದಿ ಪೂರ್ತಿ ಓದಿ. ವೈರಲ್ ಆಗಿರುವ ವೀಡಿಯೋದಲ್ಲಿ ಬಿಳಿ ಕಾಗದದ ಮೇಲೆ ಸ್ಪಾರ್ಕ್ಲಿಂಗ್ ಮೇಣದಬತ್ತಿಯನ್ನು ಬೆಳಗಿಸಲಾಗುತ್ತದೆ. ಈ ಕ್ಯಾಂಡಲ್ಸ್ ಕಬ್ಬಿಣ, ತಾಮ್ರ, ಸತು, ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಮ್ನಂತಹ ರಾಸಾಯನಿಕ ಅಂಶಗಳನ್ನು ಹೊಂದಿರುತ್ತವೆ.
ಈ ಅಂಶಗಳು ಆಕ್ಸೈಡ್ ಮತ್ತು ಕಾರ್ಬೋನೇಟ್ ಗಳಾಗಿ ಪರಿವರ್ತನೆಗೊಂಡು ಕ್ಯಾಂಡಲ್ಸ್ ನಿಂದ ಸ್ಪಾರ್ಕ್ ಹೊರಬರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಪ್ರಯೋಗದ ಕೊನೆಯಲ್ಲಿ ಬಿಳಿ ಕಾಗದದ ಮೇಲೆ ಕೆಲವು ಕಪ್ಪು ಪುಡಿಯನ್ನು ಕಾಣಬಹುದು. ಇದೇ ರೀತಿ ಕೇಕ್ ಮೇಲೆಯೂ ಇದು ಚೆಲ್ಲಿರುತ್ತದೆ. ಅದನ್ನು ಗಮನಿಸದೇ ತಿನ್ನುತ್ತೇವೆ ಎಂದು ಅಶು ಘಾಯ್ ವಿವರಿಸಿದರು. ಇಂತಹ ಕ್ಯಾಂಡಲ್ ಗಳನ್ನು ಕೇಕ್ ಮೇಲೆ ಇಡುವುದನ್ನು ತಪ್ಪಿಸುವುದು ಉತ್ತಮ ಎನ್ನುತ್ತಾರೆ ಅಶು ಘಾಯ್. ಈ ವೀಡಿಯೋ ವೈರಲ್ ಆದ ನಂತರ ಹಲವರು ವಿಭಿನ್ನ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಬರ್ತಡೇ ಕೇಕ್ ಮೇಲೆ ಅದು ನಮ್ಮ ಕಣ್ಣು ಮುಂದೆಯೇ ಇಂಥದ್ದೊಂದು ಕೆಟ್ಟದ್ದು ಇರುವುದು ನಮಗೇ ಗೊತ್ತೇ ಇಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296