ಕೊರಟಗೆರೆ : ತಾಲೂಕು ಆಡಳಿತದಿಂದ ಆ.15 ರಂದು ನಡೆಯುವ 79ನೇ ಸ್ವಾತಂತ್ರ್ಯ ದಿನಾಚರಣೆ ಸಾರ್ವಜನಿಕರ, ಸಂಘ ಸಂಸ್ಥೆಗಳ ಹಾಗೂ ವಿವಿಧ ಇಲಾಖಾ ಆಧಿಕಾರಿಗಳ ಸಹಕಾರ ನೀಡುವ ಮೂಲಕ ವಿಜೃಂಭಣೆಯಿಂದ ಆಚರಣೆ ಮಾಡಬೇಕೆಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯನ್ನು ಕಳೆದ ಬಾರಿ ಆಚರಣೆ ಮಾಡಿದಂತೆ ಈ ಬಾರಿಯೂ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಆ.15 ರಂದು ಬೆಳಗಿನ ಜಾವ ಪ್ರಭಾತ್ ಬೇರಿಯೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ತಾಲೂಕಿನ ವಿವಿಧ ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳ ಸ್ಥಬ್ದ ಚಿತ್ರಗಳೊಂದಿಗೆ ಶಾಲಾ ಮಕ್ಕಳ ಮೇರವಣಿಗೆಯೊಂದಿಗೆ ಸರ್ಕಾರಿ ಕಿರಿಯ ಕಾಲೇಜು ಕ್ರೀಡಾಂಗನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಕವಾಯಿತುನೊಂದಿಗೆ ದ್ವಜಾರೋಹಣ ನೆರವೇರಲಿದೆ ಹಾಗೂ ಈಬಾರಿ ನಿವೃತ್ತ ಸೈನಿಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ವಾಸವಿ ಯುವಜನ ಸಂಘದಿಂದ ಸಿಹಿ ವಿತರಣೆ ಹಾಗೂ ಮಂಜುನಾಥ್ ರವರಿಂದ ಮಕ್ಕಳಿಗೆ ಕುಡಿಯುವ ನೀರು ಸರಬರಾಜು ಮಾಡಲಿದ್ದಾರೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಸಿಪಿಐ ಅನಿಲ್, ಪ.ಪಂ.ಅಧ್ಯಕ್ಷೆ ಅನಿತಾ, ಸದಸ್ಯರಾದ ಕೆ.ಎನ್., ಲಕ್ಷ್ಮಿನಾರಾಯಣ್, ನಂದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಕಸಾಪ ಅಧ್ಯಕ್ಷ ಈರಣ್ಣ, ಪ.ಪಂ.ಮುಖ್ಯಾಧಿಕಾರಿ ಉಮೇಶ್, ಸಾಮಾಜಿಕ ಅರಣ್ಯಾಧಿಕಾರಿ ಶಿಲ್ಪ, ಕೃಷಿ ಇಲಾಖೆಯ ರುದ್ರಪ್ಪ, ಬಿಸಿಎಂ ಇಲಾಖೆಯ ಅನಂತ್ ರಾಜು, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ನಾಗರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ವಾಸವಿ ಯುವಜನ ಸಂಘದ ಅಧ್ಯಕ್ಷ ಬಾಲಾಜಿ, ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಷೊತ್ತಮ್, ಮುಖಂಡರುಗಳಾದ ಮೈಲಾರಪ್ಪ, ನರಸಿಂಹಮೂರ್ತಿ, ದಾಡಿ ವೆಂಕಟೇಶ್, ಎ.ಬಿ.ಸುನಿಲ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಇಲಾಖಾ ಆಧಿಕಾರಿಗಳು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC