ಬಿಬಿಎಂಪಿ ನಿರ್ವಾಹಣೆಯಲ್ಲಿರುವ 167 ಶಾಲೆಗಳ ಪೈಕೆ 73 ಶಾಲೆಗಳಷ್ಟೆ ಸೇಫ್ ಆಗಿದೆ. ಉಳಿದ 94 ಶಾಲಾ ಕಟ್ಟಡಗಳಲ್ಲಿ 67 ಶಾಲಾ ಕಟ್ಟಡಗಳನ್ನು ದುರಸ್ಥಿಗೊಳಿಸಲು, ಹಾಗೂ 19 ಶಾಲೆಗಳನ್ನು ಕೆಡವಿ ಮರು ನಿರ್ಮಾಣ ಮಾಡಲು ಇಂಜಿನಿಯರಿಂಗ್ ವಿಭಾಗದಿಂದ ಬಿಬಿಎಂಪಿಗೆ ಶಿಫಾರಸು ಮಾಡಲಾಗಿದೆ. ಪೂರ್ವ ವಲಯದ 12, ಪಶ್ಚಿಮ ವಲಯದ 06, ದಕ್ಷಿಣ ವಲಯದ 01 ಶಾಲೆಗಳು ಶಿಥಿಲಾವಸ್ಥೆಯಲ್ಲಿ ಇದೆ. ಶಿವಾಜಿ ನಗರ ನರ್ಸರಿ ಶಾಲೆ ಕಟ್ಟಡ ಕುಸಿದ ಪ್ರಕರಣದ ನಂತರ ಟೆಕ್ನಲ್ ಕಮಿಟಿಗೆ ಕಮಿಷನರ್ ರಿಪೋರ್ಟ್ ಕೇಳಿದ್ದಾರೆ.
ಬಿಬಿಎಂಪಿ ನಿರ್ವಾಹಣೆಯಲ್ಲಿರುವ ಎಲ್ಲ ಶಾಲೆ ಹಾಗೂ ಆಸ್ಪತ್ರೆ ಕಟ್ಟಡಗಳ ಸುರಕ್ಷಿತಗೆ ರಿಪೋರ್ಟ್ ಕೇಳಿದ್ವಿ. ಇಂಜಿನಿಯರಿಂಗ್ ವಿಭಾಗದಿಂದ ತಾಂತ್ರಿಕವಾಗಿ ಕಟ್ಟಡಗಳ ಕ್ವಾಲಿಟಿ ಚೆಕ್ ಮಾಡಲಾಗಿದೆ. 167 ಶಾಲೆಗಳ ಪೈಕಿ 19 ಶಾಲೆಯ ಕಟ್ಟಡಗಳು ಹಳೆಯದಾಗಿದ್ದು, ಹೊಸ ಕಟ್ಟಡಗಳ ನಿರ್ಮಾಣಕ್ಕೆ ಟೆಕ್ನಿಕಲ್ ಕಮಿಟಿ ಶಿಫಾರಸ್ಸು ಮಾಡಿದೆ. ಉಳಿದ ಬಿಬಿಎಂಪಿಗೆ ಸಂಬಂಧಿಸಿದ ಎಲ್ಲ ಕಟ್ಟಡಗಳ ಕ್ವಾಲಿಟಿ ಬಗ್ಗೆ ಸಹ ರಿಪೋರ್ಟ್ ಕೇಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.


