ಕಂಬಳಕ್ಕೆ 228 ಜೊತೆ ಕೋಣಗಳು ರಿಜಿಸ್ಟರ್ ಆಗಿವೆ ಎಂದು ಶಾಸಕ ಆಶೋಕ್ ರೈ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶು ಇಲಾಖೆಯಿಂದ ಪರ್ಮಿಷನ್ ತೆಗೆದುಕೊಂಡಿದ್ದೇವೆ.
ಕೋಣಗಳ ಆಹಾರ ಮತ್ತು ನೀರಿನ ಬಗ್ಗೆ ಕೋಣಗಳ ಯಜಮಾನರು ನೋಡಿಕೊಳ್ಳುತ್ತಾರೆ. ಕಂಬಳದ ಟ್ರಾಕ್ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿವೆ. ಈ ಕೋಣಗಳಲ್ಲಿ 50 ಬಗೆಯ ಕೋಣಗಳ ರೆಕಾರ್ಡ್ ಮಾಡಿವೆ. ಕಂಬಳಕ್ಕೆ ಹೊಸ ಕೋಣಗಳನ್ನ ಖರೀದಿ ಮಾಡಲಾಗಿದೆ. 180 ಸ್ಟಾಲ್ ಗಳನ್ನ ಹಾಕಲಾಗಿದೆ. ಎರಡು ದಿನ ನಿರಂತರವಾಗಿ ನಡೆಯಲಿದೆ ಎಂದರು. ಕಂಬಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿವಿಐಪಿ, ವಿಐಪಿಗೆ ಸೆಪೆರೇಟ್ ವ್ಯವಸ್ಥೆ ಮಾಡಲಾಗಿದೆ. ಕಂಬಳದಲ್ಲಿ ಗೆದ್ದವರಿಗೆ ಮೊದಲ ಬಹುಮಾನ 16 ಗ್ರಾಂ ಚಿನ್ನ 1 ಲಕ್ಷ ನಗದು ನೀಡಲಾಗುತ್ತದೆ. ದ್ವಿತೀಯ ಸ್ಥಾನಕ್ಕೆ 8 ಗ್ರಾಮ್ ಚಿನ್ನ, 50 ಸಾವಿರ ಕೊಡಲಾಗುತ್ತದೆ. ತೃತೀಯ ಸ್ಥಾನಕ್ಕೆ 4 ಗ್ರಾಂ ಚಿನ್ನ 25 ಸಾವಿರ ನಗದನ್ನ ಬಹುಮಾನವಾಗಿ ನೀಡಲಾಗುತ್ತೆ. ಊಟದ ವ್ಯವಸ್ಥೆ ಕೂಡ ಇರಲಿದೆ ಎಂದು ವಿವರಿಸಿದರು.
ನ. 25 ಮತ್ತು ನ. 26ರಂದು ನಡೆಯಲಿರುವ ಕಂಬಳ ಸ್ಪರ್ಧೆಗೆ ಇಡೀ ಬೆಂಗಳೂರು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಕಂಬಳ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಕಂಬಳದ ಟ್ರ್ಯಾಕ್ ಗೆ ರಾಜಮಹಾರಾಜ ಕೆರೆ ಎಂದು ಹೆಸರಿಟ್ಟಿದ್ದೇವೆ.
ಸಭಾಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದ್ದೇವೆ. ಸಾಂಸ್ಕೃತಿಕ ವೇದಿಕೆಗೆ ಚಾಮರಾಜ ಒಡೆಯರ್ ಅವರ ಹೆಸರನ್ನ ಇಟ್ಟಿದ್ದೇವೆ ಎಂದು ಕಂಬಳ ಸಮಿತಿ ವಿಸೃತ ಮಾಹಿತಿ ನೀಡಿದೆ.


