ಬೆಂಗಳೂರು: ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಸಂಜಯನಗರ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವ ಆರೋಪ ಕೇಳಿ ಬಂದಿದೆ.
ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮುಂದೆ ಯುವತಿ ಕಾರ್ ಪಾರ್ಕಿಂಗ್ ಮಾಡಿದ್ದರು. ಈ ಸಂಬಂಧ ಮನೆಯ ಸದಸ್ಯ ಯುವತಿಗೆ ಮನಬಂದಂತೆ ನಿಂದಿಸಿದ್ದಾನೆ.
ಈ ಬಗ್ಗೆ ಸಾಕ್ಷಿ ಸಮೇತ ದೂರು ನೀಡಲು ಠಾಣೆಗೆ ಪೊಲೀಸ್ ಹೋದರೆ ದೂರು ಸ್ವೀಕರಿಸಿಲ್ಲ. ಪೊಲೀಸರ ಕಾರ್ಯವೈಕರಿಗೆ ಯುವತಿ ಸ್ನೇಹಿತರು ಅಸಮಾಧಾನ ಹೊರಹಾಕಿದ್ದಾರೆ.


