ತುಮಕೂರು: ಗೃಹ ಸಚಿವ ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೊರಟಗೆರೆ ಪಟ್ಟಣದಲ್ಲಿ ಕನ್ನಡ ಧ್ವಜ ಸ್ತಂಭ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರೆವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೊರಟಗೆರೆ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.
ಓರ್ವ ಎಎಸ್ ಪಿ, ಇಬ್ಬರು ಡಿವೈಎಸ್ ಪಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು. 2022 ನವೆಂಬರ್ 2 ರಂದು ಕನ್ನಡ ಧ್ವಜ ಸ್ತಂಭವನ್ನ ನಿರ್ಮಿಸಲಾಗಿತ್ತು. ಕೊರಟಗೆರೆ ಪಟ್ಟಣ ಪಂಚಾಯ್ತಿಯಿಂದ ಅನುಮತಿ ಪಡೆಯದೇ ಕನ್ನಡ ಧ್ವಜ ನಿರ್ಮಾಣ ಮಾಡಲಾಗಿತ್ತು.
ವಾಹನ ಸಂಚಾರಕ್ಕೆ ಅಡಚಣೆ ಆಗುತ್ತೆ ಎಂದು ಕನ್ನಡ ಧ್ವಜ ಸ್ತಂಭವನ್ನು ಫೆಬ್ರವರಿ 23 ರಂದು ತಡರಾತ್ರಿ ಕೊರಟಗೆರೆ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾರ್ಯಚರಣೆ ನಡೆಸಿ ತೆರವುಗೊಳಿಸಲಾಗಿತ್ತು.
ತುಮಕೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಮಾತನಾಡಿ, ಕೊರಟಗೆರೆಯಲ್ಲಿ ಧ್ವಜಸ್ತಂಭ ತೆರವುಗೊಳಿಸಿ ಕನ್ನಡದ ಕುಲಕೋಟಿಗೆ ಅವಮಾನ ಮಾಡಲಾಗಿದೆ. ಕೊರಟಗೆರೆ ಅಪಟ್ಟ ಕನ್ನಡಿಗರ ಊರು ಎಂದಿದ್ದಾರೆ.
ಇಂಥ ಊರಲ್ಲಿ ಕನ್ನಡ ಬಾವುಟ ಕಿತ್ತುಹಾಕಿದ್ದಾರೆ. ನಾಡ ದ್ರೋಹಿ ಮರಾಠಿಗರಿಗೂ ನಿಮಗೂ ಏನು ವ್ಯತ್ಯಾಸ. ಮತ್ತೆ ಕೊರಟಗೆರೆಯಲ್ಲಿ ಸ್ತಂಭವನ್ನು ಸ್ಥಾಪನೆ ಮಾಡಬೇಕು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4