ಪಾವಗಡ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮುಂದಿನ 6 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವಂತೆ ಯಲ್ಲೊ ಅಲರ್ಟ್ ಘೋಷಿಸಲಾಗಿರುತ್ತದೆ.
ತಾಲ್ಲೂಕಿನಲ್ಲಿ ಪ್ರಮುಖ ಬೆಳೆಗಳಾದ ಶೇಂಗಾ, ತೊಗರಿ, ರಾಗಿ, ಭತ್ತ ಹಾಗೂ ಮುಸಕಿನ ಜೋಳ ಬೆಳೆಗಳನ್ನು ಭಾರೀ ಮಳೆಯಿಂದ ಸಂರಕ್ಷಿಸಬೇಕಾಗಿರುತ್ತದೆ. ಶೇಂಗಾ ಬೆಳೆಯು ಕಟಾವು ಹಂತದಲ್ಲಿದ್ದು, ತಗ್ಗು ಪ್ರದೇಶದ ಜಮೀಗಳಲ್ಲಿ ನೀರು ನಿಂತು ಬೆಳೆ ಹಾಳಾಗುವ ಸಂಭವವಿರುವುದರಿಂದ ಬಸಿಗಾಲುವೆಗಳನ್ನು ತೆಗೆದು, ಮಳೆ ನೀರನ್ನು ಹೊರ ಹಾಕಲು ಕ್ರಮ ವಹಿಸುವುದು.
ತೊಗರಿ ಬೆಳೆಯು ಹೂಬಿಡುವ ಹಂತದಲ್ಲಿದ್ದು ಮೋಡ ಹಾಗೂ ಮಳೆಯ ಕಾರಣ ಕಾಯಿಕೊರಕ ಕೀಟದ ಭಾಧೆಯು ಅಲಲ್ಲಿ ಕಂಡು ಬಂದಿರುತ್ತದೆ. ಈ ಕೀಟವು ಹೂವು, ಮೊಗ್ಗು ಕೊರೆಯುತ್ತದೆ, ಹೂ ಉದುರುವುದು, ಕಾಯಿಗಳನ್ನು ಕೊರೆದು ತಿನ್ನುತ್ತದೆ. ಈ ಕೀಟವನ್ನು ಒಂದು ಲೀಟರ್ ನೀರಿಗೆ 0.5 ಎಂ.ಎಲ್ ಇಂಡಾರೈಕಾರ್ಬ್ 45SP, 0.15 ML ಸ್ಟೈನೋಸಾಡ್ –45 SC, 2 ML ಪ್ರೋಪೆನೋಪಾಸ್ 25% ಈ.ಸಿ ಕೀಟನಾಶಕಗಳಿಂದ ಸಿಂಪರಣೆಯನ್ನು ಕೈಗೊಂಡು ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರಾದ ಆಜಯ್ ಕುಮಾರ್ ಆರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296