ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಹಂದಿಕೆರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಕಾಮಗಾರಿ ಪೂರ್ಣಗೊಂಡದ ಮೇಲೆ ಹಣ ಪಾವತಿಸಬೇಕು ಎಂದು ಹಂದಿಕೆರಾ ಗ್ರಾಮದ ಸಮಾಜ ಸೇವೆಕ ಅಮೂಲ ಬಿರಾದಾರ ಅವರು ಮಂಗಳವಾರ ಚಿಮೆಗಾಂವ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾನಾಜಿ ಪಾಟೀಲವರಿಗೆ ಮನವಿ ಸಲ್ಲಿಸಿದರು.
ಹಂದಿಕೆರಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷ ಹಿಂದೆ ಮಕ್ಕಳಗಾಗಿ ಶೌಚಾಲಯಗಾಗಿ ಕಟ್ಟಿಸಿದ ಶೌಚಾಲಯವನ್ನು ಅಪೂರ್ಣ ಇದ್ದು, ಹೊಂಡಾ ಸೇಫ್ಟಿ ಟ್ಯಾಂಕ್ ಮಾಡದೆ ಶೌಚಾಲಯ ಕೋಣೆಗಳನ್ನು ತಯಾರಿಸಿದ್ದಾರೆ. ಈ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಹಣ ಪಾವತಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವರದಿ ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx