ಧಾರವಾಡ: ರೋಗಿಗಳ ಜೀವನದ ಗುಣಮಟ್ಟ ಆಧರಿಸಿ ಸಂಶೋಧನೆ ಮಾಡುವ ಅಗತ್ಯವಿದೆ ಎಂದು ಧಾರವಾಡದ ಎಸ್. ಡಿ. ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ಕುಮಾರ್ ಅಭಿಪ್ರಾಯ ಪಟ್ಟರು .
ಅವರಿಂದು ಎಸ್.ಡಿ.ಎಂ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹತ್ತನೇ ವಾರ್ಷಿಕ ಅಂತರಾಷ್ಟ್ರೀಯ ಎಸ್ .ಡಿ .ಎಮ್ ಮೀಟು –24 (ಸೊಸೈಟಿ ಆಫ್ ಮೈಟೋಕಾಂಡ್ರಿಯ ರಿಸರ್ಚ್ ಅಂಡ್ ಮೆಡಿಸಿನ್ ಭಾರತ ) ಮೈಟೋಕಾಂಡ್ರಿಯಾ ಸಂಶೋಧನಾ ಮತ್ತು ಚಿಕಿತ್ಸೆಯಲ್ಲಿ ಪ್ರಗತಿ ಎಂಬ ವಿಚಾರ ಸಂಕೀರ್ಣದಲ್ಲಿ ಮಾತನಾಡಿದರು.
ಮೈಟೊಕೊಂಡ್ರಿಯ ಎಲ್ಲಾ ಜೀವಕೋಶಗಳ ಶಕ್ತಿಯಾಗಿದೆ. ಇದರ ಕಾಯಿಲೆಗಳು ಅಪರೂಪದ ಕಾಯಿಲೆಗಳಾಗಿದ್ದು , ಇದರ ಸಂಶೋಧನೆಗಳು ಪ್ರಗತಿಯಲ್ಲಿವೆ ಎಂದರು.
ಸೊಸೈಟಿ ಆಫ್ ಮೈಟೋಕಾಂಡ್ರಿಯ ರಿಸರ್ಚ್ ಅಂಡ್ ಮೆಡಿಸಿನ್ ಭಾರತದ ಅಧ್ಯಕ್ಷರಾದ ಡಾ.ಕೆ.ತಂಗರಾಜು ಸೊಸೈಟಿ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಸಮ್ಮೇಳನದ ಅಂಗವಾಗಿ ಬಿತ್ತಿ ಪತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಮ್ಮೇಳನದಲ್ಲಿ ಅತ್ಯುತ್ತಮ ಬಿತ್ತಿ ಪತ್ರ ಪ್ರಶಸ್ತಿ ,ಯುವ ಪೀಳಿಗೆಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಈ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ ನೂರಕ್ಕೂ ಹೆಚ್ಚು ತಜ್ಞ ಪ್ರತಿನಿಧಿಗಳು, ಆಡಳಿತ ನಿರ್ದೇಶಕ ಸಾಕೆತ್ ಶೆಟ್ಟಿ ಇನ್ನಿತರರು ಭಾಗವಹಿಸಿದ್ದರು. ವಿ .ಜೀವನ್ಧರ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಂಶೋಧನಾ ನಿರ್ದೇಶಕ ಮತ್ತು ಸಂಘಟನಾ ಕಾರ್ಯದರ್ಶಿ ಡಾ.ಕೆ.ಸತ್ಯಮೂರ್ತಿ ಸ್ವಾಗತಿಸಿದರು. ಅರವಿಂದ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಡಾ.ಅಜಯ್ ಕುಮಾರ್ ಹೋಲಿ ವಂದಿಸಿದರು.
ವರದಿ: ಜೆ. ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296