“ಪ್ರತಿಶೋಧ” ಎಂಬ ಕಥೆ, ಪುರಾತನ ಕಾಲದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುತ್ತದೆ, ಮತ್ತು ಕಲೆಯ ಶ್ರೇಷ್ಠತೆಯ ಮೇಲೆ ಪ್ರಾಮುಖ್ಯತೆ ನೀಡುತ್ತದೆ. ಈ ಕಥೆ, ಕಲಾವಿದರ ಮೂಲಕ ತರ್ಕ ಮತ್ತು ನ್ಯಾಯವನ್ನು ಪ್ರತಿಪಾದಿಸುವ ಶ್ರೇಷ್ಠ ಉದಾಹರಣೆಯಾಗಿದೆ.
ಕಲೆಯ ಪ್ರಭಾವ ಮತ್ತು ಸಾಮರ್ಥ್ಯ:
ಕಥೆಯ ಪ್ರಮುಖ ಪಾತ್ರಗಳು ರಾಮಸೇನ ಮತ್ತು ವಿಷ್ಣುಸೇನ, ಅವರು ತಮ್ಮ ಚಿತ್ರಕಲೆಯ ಮೂಲಕ ಸಮುದಾಯದಲ್ಲಿ ಕೀರ್ತಿಯನ್ನೂ, ಪ್ರಭಾವವನ್ನೂ ಸಾಧಿಸಿದ್ದಾರೆ. ಈ ಕಾಲದಲ್ಲಿ, ಚಿತ್ರಕಲೆಯು ಸಾಮಾಜಿಕ ಇಷ್ಟಗಳು ಮತ್ತು ಪ್ರಭಾವವನ್ನು ನಿಭಾಯಿಸುವ ಶಕ್ತಿ ಹೊಂದಿತ್ತು. ರಾಮಸೇನ ಮತ್ತು ವಿಷ್ಣುಸೇನ ಅವರ ಕಲೆ, ಶ್ರೇಷ್ಠತೆಯನ್ನು ತಲುಪುವುದು ಮಾತ್ರವಲ್ಲದೆ, ಅವರು ಬರೆದ ಚಿತ್ರಗಳಲ್ಲಿ ನೈತಿಕ ಪಾಠಗಳನ್ನು ಓದುಗರಿಗೆ ನೀಡುತ್ತದೆ.
ಮೋಸ ಮತ್ತು ಪ್ರತಿಶೋಧ:
ಕಥೆಯ ಸೆಟ್ಟಿಂಗ್ ನಲ್ಲಿ, ತಂತ್ರ ಮತ್ತು ಮೋಸಗಳು ಶ್ರೇಷ್ಠ ಕಲೆಯ ಮೇಲೆ ನೆಲೆಸಿದ ಪ್ರಸ್ತಾಪವನ್ನು ಒಳಗೊಂಡಂತೆ, ಅನುಕೇತು ತನ್ನ ಚತುರತೆಯನ್ನು ಪ್ರದರ್ಶಿಸುತ್ತದೆ. ತನ್ನ ನಷ್ಟವನ್ನು ಮರೆಮಾಡಲು, ಅವನು ರಾಮಸೇನನ ಪ್ರತಿಷ್ಠಿತ ಚಿತ್ರಕಲೆಯು ಚಿತ್ರೀಕೃತವಾದ ಪಾರಿವಾಳಗಳನ್ನು ಹಕ್ಕಿಗಳು ಎಂದು ಹೋಲಿಸುತ್ತಾನೆ. ಇದು ತನ್ನನ್ನು ಸತ್ಯವನ್ನು ಸಾಕಾರಗೊಳ್ಳುವ ಮೂಲಕ ಸತ್ಯವನ್ನು ಹೊಂದಿದಾಗ, ಅವನ ಕಾರ್ಯಪಟುತನದ ಹೊರತಾಗಿ, ಕಾಲದ ಮೂಲಕ ವ್ಯಕ್ತಿಯ ಬುದ್ಧಿಮತ್ತೆಯು ಹೇಗೆ ನ್ಯಾಯವನ್ನು ತಲುಪುತ್ತದೆ ಎಂಬುದನ್ನು ನಿರೂಪಿಸುತ್ತದೆ.
ನೈತಿಕವಾಗಿ ಕ್ರಿಯಾತ್ಮಕತೆ:
ಮೋಸವನ್ನು ಸಮರ್ಥವಾಗಿ ಪರಿಹರಿಸಲು ರಾಮಸೇನ ತನ್ನ ಶ್ರೇಷ್ಠತೆಯನ್ನು ಮತ್ತು ಬುದ್ಧಿವಂತಿಕೆಯನ್ನು ಬಳಸುತ್ತಾನೆ. ತನಗೆ ನೀಡಲಾದ ಸಮಯವನ್ನು ಸರಿಯಾಗಿ ಬಳಸಿಕೊಂಡು, ರಾಮಸೇನ ತಪ್ಪು ಆರೋಪವನ್ನು ತೋರಿಸುತ್ತಾನೆ ಮತ್ತು ಸತ್ಯವನ್ನು ವ್ಯಕ್ತಪಡಿಸುತ್ತಾನೆ. ಈ ಮೂಲಕ, ನ್ಯಾಯವನ್ನು ಸಾಧಿಸುವಲ್ಲಿ ಕಲೆಯ ಮತ್ತು ಸತ್ಯದ ಶಕ್ತಿ ಸ್ಪಷ್ಟವಾಗಿ ತೋರಿಸುತ್ತವೆ.
ಕಥೆಯ ಪಾಠ ಮತ್ತು ಅದರ ಪ್ರಸ್ತಾಪ:
“ಪ್ರತಿಶೋಧ” ಕಥೆಯು ಕಲೆಯ ಪ್ರಭಾವ, ತಂತ್ರ ಮತ್ತು ನೈತಿಕತೆಯ ಮಹತ್ವವನ್ನು ತೋರಿಸುತ್ತದೆ. ಇದು ಕೇವಲ ಹಳೆಯ ಕಾಲದ ಕಥೆಯಲ್ಲ, ಆದರೆ ನಮ್ಮ ಜೀವನದ ಸಂಕೀರ್ಣತೆಗಳನ್ನು ಹೇಗೆ ನಿಭಾಯಿಸಬೇಕೆಂದು ಕಲಿಸುತ್ತದೆ. ಸತ್ಯವನ್ನು ಹಿಡಿಯಲು, ಕಲೆಯ ಶ್ರೇಷ್ಠತೆಯನ್ನು ಮತ್ತು ಚತುರತೆಯನ್ನು ಬಳಸುವುದು ಹೇಗೆ ಪರಿಣಾಮಕಾರಿಯಾಗಬಹುದು ಎಂಬುದನ್ನು ಇದು ವಿವರಿಸುತ್ತದೆ.
ಈ ರೀತಿ, “ಪ್ರತಿಶೋಧ” ಕಥೆ, ತನ್ನ ವಿಶಿಷ್ಟ ಶ್ರೇಷ್ಠತೆಯನ್ನು ಮತ್ತು ಪಾಠವನ್ನು ಸಾಧಿಸಲು ಕಲೆಯ ಪ್ರಯೋಜನ ಮತ್ತು ಪ್ರಾಮುಖ್ಯತೆಯನ್ನು ಸಮರ್ಪಕವಾಗಿ ಪರಿಚಯಿಸುತ್ತದೆ.
ಬಹಳ ಹಿಂದೆ ಸೋಮಪುರಿ ಮತ್ತು ಧರ್ಮಪುರಿ ಎಂಬ ರಾಜ್ಯಗಳಲ್ಲಿ ರಾಮಸೇನ ಮತ್ತು ವಿಷ್ಣುಸೇನ ಎಂಬ ಉತ್ತಮ ಚಿತ್ರಕಲಾ ನಿಪುಣರಿದ್ದರು. ಇವರ ಚಿತ್ರಕಲೆಯ ಮುಂದೆ ಬೇರೆ ಎಲ್ಲ ನಿಪುಣರ ಚಿತ್ರಕಲೆ ನಗಣ್ಯವಾಗುತ್ತಿದ್ದವು. ಒಮ್ಮೆ ಧರ್ಮಪುರಿ ರಾಜ್ಯದ ಅನುಕೇತು ಎಂಬ ಪ್ರಖ್ಯಾತ ಜೋಳ ವ್ಯಾಪಾರಿ ಇದ್ದ, ಇವನು ಎಂತಹವರನ್ನೂ ಸುಲಭವಾಗಿ ಏಮಾರಿಸಿ ಸಾಕಷ್ಟು ಹಣ ಸಂಪಾದಿಸಿದ್ದನು.
ಹೀಗಿರುವಾಗ ಪಕ್ಕದ ರಾಜ್ಯ ಸೋಮಪುರಿಯಲ್ಲಿ ಜೋಳ ವ್ಯಾಪಾರ ಮಾಡಲು 10 ಎತ್ತಿನ ಬಂಡಿಗಳಲ್ಲಿ ಜೋಳದ ಮೂಟೆಗಳನ್ನು ಹೇರಿಕೊಂಡು ಸೋಮಪುರಿಗೆ ಹೊರಟ. ಮಾರ್ಗ ಮದ್ಯ ಬರುವಾಗ ಪ್ರಯಾಣಿಕರಿಗೆ ಮನ ತಣಿಯಲು ರಾಮಸೇನ ಬರೆದಿದ್ದ ಚಿತ್ರಪಟಲಗಳನ್ನು ದಾರಿಯುದ್ದಕ್ಕೂ ಅಲ್ಲಲ್ಲಿ ಹಾಕಲಾಗಿತ್ತು ಅವುಗಳಲ್ಲಿ ಪಾರಿವಾಳಗಳಿರುವ ಚಿತ್ರಪಟ ಕಂಡು ಆತ ಒಂದು ಉಪಾಯ ಮಾಡಿ ಜೋಳದ ಮೂಟೆಗಳನ್ನು ಕಾಡಿನ ಮಧ್ಯೆ ಗುಹಿಯೊಂದರಲ್ಲಿ ಬಚ್ಚಿಟ್ಟು, ಸೋಮಪುರಕ್ಕೆ ಖಾಲಿ ಎತ್ತಿನ ಗಾಡಿಗಳಲ್ಲಿ ಬಂದ.
ನಂತರ ಬೃಜಂಗ ರಾಜನ ಎದುರು ಕೈ ಮುಗಿದು ನಿಂತು ಮಹಾರಾಜರೇ ನಾನು ಧರ್ಮಪುರಿ ರಾಜ್ಯದಿಂದ ಹತ್ತು ಎತ್ತಿನ ಬಂಡಿಗಳಲ್ಲಿ ಜೋಳದ ಕಾಳುಗಳನ್ನು ವ್ಯಾಪಾರ ಮಾಡಲೆಂದು ತರುತ್ತಿದ್ದೆವು,ಆದರೆ ಮಾರ್ಗಮಧ್ಯ ನಾವು ಮಲಗಿ ವಿಶ್ರಮಿಸುವಾಗ ರಾಮಸೇನನ ಚಿತ್ರ ಪಟಗಳಲ್ಲಿದ್ದ ಪಾರಿವಾಳಗಳು ಹಾರಿ ಬಂದು ಎಲ್ಲ ಜೋಳಕಾಳುಗಳನ್ನು ತಿಂದು ಮುಗಿಸಿ ನಂತರ ತಮ್ಮ ತಮ್ಮ ಪಟಗಳಿಗೆ ಹಾರಿ ಹೋಗಿ ಸೇರಿಕೊಂಡವು, ಅವು ತಿಂದ ಬಳಿಕ ಒಟ್ಟಿಗೆ ಎಲ್ಲ ಬರ್ರನೆ ಸದ್ದು ಮಾಡುತ್ತಾ ಹಾರಿದಾಗ ನಾವೆಲ್ಲರೂ ಎಚ್ಚರಗೊಂಡು ನೋಡಿದೆವು. ಎಂದು ದೂರು ನೀಡಿದನು. ಚಿತ್ರಪಟಗಳಲ್ಲಿರುವ ಪಾರಿವಾಳಗಳು ಹೇಗೆ ತಿನ್ನಲು ಸಾಧ್ಯ ಎಂದು ಎಲ್ಲರಿಗೂ ಅನಿಸಿದರೂ ಅಂದು ಸತ್ಯಯುಗವಾಗಿದ್ದ ಕಾರಣ ಎಲ್ಲರೂ ನಂಬಿದನು. ನಂತರ ಮಾತು ಮುಂದುವರೆಸಿ ಈಗ ನನಗೆ ನಷ್ಟವಾಗಿರುವ 50 ಸಹಸ್ರ ಸ್ವರ್ಣಮುದ್ರೆಯನ್ನು ಸ್ವತಃ ರಾಮಸೇನನೇ ಕಟ್ಟಿಕೊಡಬೇಕು ಇಲ್ಲವಾದಲ್ಲಿ ನಾನು ನಮ್ಮ ರಾಜ ಅಳಸಿಂಗರಿಗೆ ಹೇಳಿ ರಾಮಸೇನನಿಗೆ ಶಿಕ್ಷೆ ಕೊಡಿಸುವೆ.
ಎಂದಾಗ ರಾಜ ಬೃಜಂಗ ಇದು ಒಳ್ಳೆ ತಲೆನೋವು ತಂದಿತಲ್ಲಾ ಎಂದು ಯೋಚಿಸುತ್ತಿರುವಾಗ ರಾಮಸೇನ ಮನದಲ್ಲಿ ಇದು ನನ್ನ ಮತ್ತು ನಮ್ಮ ರಾಜ್ಯದ ಮರ್ಯಾದೆ ಕಳೆಯುವ ಸಲುವಾಗಿ ಅನುಕೇತು ಹೀಗೆ ಮಾಡುತ್ತಿದ್ದಾನೆ ಎಂದು ಯೋಚಿಸಿ ನಂತರ ಜೋರಾದ ಧ್ವನಿಯಲ್ಲಿ ಹೌದು ಪ್ರಭು ಇದರ ಜವಾಬ್ದಾರಿ ನನ್ನದೇ, ನೋಡು ಅನುಕೇತು ನನಗೆ 3 ದಿನಗಳ ಕಾಲಾವಕಾಶ ಕೊಡು ನಿನ್ನ ಹಣ ನಾನು ನಿಮ್ಮ ರಾಜ್ಯಕ್ಕೆ ಬಂದು ನಿನಗೆ ತಲುಪಿಸುವೆ ಎಂದಾಗ ತನ್ನ ಜಾಲದಲ್ಲಿ ಎಲ್ಲರನ್ನು ಬೀಳಿಸಿದ ಅನುಕೇತು ಆಯಿತು ಎಂದು ಹೇಳಿ ಮನದಲ್ಲಿ ಒಮ್ಮೆ ನಕ್ಕು ಅಲ್ಲಿಂದ ಹೊರಟುಹೋದ.
ರಾಜ ಬೃಜಂಗ ನೀನು ಹೇಗೆ ನಿಭಾಯಿಸುವೆ ರಾಮಸೇನ ಎಂದಾಗ ಚಿಂತಿಸಿದಿರಿ ಪ್ರಭು ನಾನು ಗೆದ್ದು ಬರುತ್ತೇನೆ ಎಂದು ಹೇಳಿ 3 ದಿನಗಳ ಬಳಿಕ ಬರಿಕೈಯಲ್ಲಿ ಧರ್ಮಪುರಿಯ ಅಳಸಿಂಗನ ಆಸ್ಥಾನಕ್ಕೆ ಹೋದ . 50 ಸಹಸ್ರ ಸ್ವರ್ಣಮುದ್ರಿಕೆ ಕನಸು ಕಾಣುತ್ತಿದ್ದ ಅನುಕೇತು ಅದಾಗಲೇ ಆಸ್ಥಾನದಲ್ಲಿ ಇದ್ದ ರಾಮಸೇನನ್ನು ನೋಡುತ್ತಲೇ ಎಲ್ಲಿ ನನ್ನ ಸ್ವರ್ಣಮುದ್ರಕೆ ಇಲ್ಲಿ ಕೊಡು ಎಂದಾಗ, ರಾಜ ಅಳಸಿಂಗನ ಮುಂದೆ ಕೈಕಟ್ಟಿ ನಿಂತ ರಾಮಸೇನ, ಪ್ರಭುಗಳೇ ಏನು ಮಾಡಲೀ ನಾನು 50 ಸಹಸ್ರ ಸ್ವರ್ಣಮುದ್ರಕೆ ಚೀಲ ಹಿಡಿದು ತರುವಾಗ ಮಾರ್ಗಮಧ್ಯೆ ವಿಷ್ಣಸೇನರು ಬರೆದಿದ್ದ ಚಿತ್ರಪಟಗಳಲ್ಲಿ ಡಕಾಯಿತರು ಇದ್ದಾರೆ ಎಚ್ಚರಿಕೆ ಎಂಬ ಚಿತ್ರ ಪಟ ನೋಡುತ್ತಾ ತನ್ನ ಚೀಲ ಭದ್ರಪಡಿಸಿಕೊಳ್ಳುತ್ತಿರುವಾಗಲೇ ಆ ಪಟದಲ್ಲಿದ್ದ ಒಬ್ಬ ಢಕಾಯಿತನ ಚಿತ್ರ ಮನುಷ್ಯನಾಗಿ ಬದಲಾಗಿ, ಪಟದಿಂದ ಕೆಳಗೆ ಧುಮುಕಿ ನನ್ನಲ್ಲಿದ್ದ ಹಣದ ಚೀಲವನ್ನು ಕಿತ್ತುಕೊಂಡು ಮತ್ತೆ ಪಟ ಸೇರಿಕೊಂಡು ಬಿಟ್ಟ, ಈಗ ನನಗೆ ಆಗಿರುವ ನಷ್ಟವನ್ನು ಸ್ಮಯಂ ವಿಷ್ಣುಸೇನನೇ ನನಗೆ ಕಟ್ಟಿ ಕೊಡಬೇಕು ಇಲ್ಲದಿದ್ದರೆ ನಾನು ನಮ್ಮ ರಾಜ ಬೃಜಂಗರಿಗೆ ಹೇಳಿ ವಿಷ್ಣುಸೇನನಿಗೆ ಶಕ್ಷೆ ಕೊಡಿಸುವೆ ಎಂದಾಗ ಅನುಕೇತು ತಾನು ತೋಡಿದ್ದ ಜಾಲದಲ್ಲೇ ತಾನು ಬಿದ್ದದ್ದು ಅರಿವಾಗಿ, ಅವಮಾನಿತನಾಗಿ ಅಳಸಿಂಗನ ಕೋಪಕ್ಕೆ ಒಳಗಾದ ನಂತರ ಎಲ್ಲರಲ್ಲೂ ಕ್ಷಮೆ ಕೇಳಿದ, ಕಾಡಿನಲ್ಲಿ ಬಚ್ಚಿಟ್ಟಿದ್ದ ಜೋಳದಕಾಳುಗನ್ನು ಪ್ರಾಣಿ ಪಕ್ಷಿಗಳು ತಿಂದು ಅಲ್ಲಿಯೂ ನಷ್ಟ ಅನುಭವಿಸಿದ. ಇತ್ತ ಸೋಮಪುರಿಗೆ ಹಿಂತಿರುಗುತ್ತಲೇ ರಾಜ ಬೃಜಂಗ ರಾಮಸೇನನ್ನು ಸನ್ಮಾನಿಸಿದನು.
ವಿಶೇಷ ಲೇಖನ
ರಚನೆ : ವೇಣುಗೋಪಾಲ್, ತುಮಕೂರು
ಅನಿಸಿಕೆ ಅಭಿಪ್ರಾಯ ತಿಳಿಸಲು ಫೋನ್: 9449138522
ಉದಯನ್ಮುಖ ಬರಹಗಾರರು