nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026
    Facebook Twitter Instagram
    ಟ್ರೆಂಡಿಂಗ್
    • ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
    • ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು
    • ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ
    • ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ
    • ತಿಪಟೂರಿನ ಟೈಮ್ ಕಾಲೇಜಿಗೆ ನೂರಕ್ಕೆ ನೂರು ಫಲಿತಾಂಶ: ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿನಿ ರಶ್ಮಿಗೆ 1 ಲಕ್ಷ ರೂ. ಬಹುಮಾನ ಘೋಷಣೆ
    • ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
    • ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ
    • ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ | ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು: ಸಚಿವ ಡಾ.ಜಿ.ಪರಮೇಶ್ವರ
    ಕೊರಟಗೆರೆ April 23, 2025

    ಕೊರಟಗೆರೆ | ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು: ಸಚಿವ ಡಾ.ಜಿ.ಪರಮೇಶ್ವರ

    By adminApril 23, 2025No Comments2 Mins Read
    parameshwar

    ಕೊರಟಗೆರೆ: ಬಹುವರ್ಷದ ಪಟ್ಟಣದ ಜನರ ಕನಸಾಗಿರುವ ಪಪಂಯನ್ನು ಪುರಸಭೆಯನ್ನಾಗಿ ಮಾಡುವ ಪ್ರಸ್ತಾವನೆ ಈಗ ರಾಜ್ಯ ಸರಕಾರದ ಕೈಸೇರಿದೆ. ಪಪಂಯ 15ವಾರ್ಡುಗಳ ಸಮಗ್ರ ಅಭಿವೃದ್ದಿಗೆ ಮತ್ತೆ 25 ಕೋಟಿ ಅನುದಾನದ ಪ್ರಸ್ತಾವನೆಯ ರೂಪುರೇಖೆ ಸಿದ್ದವಿದೆ ಎಂದು ಪಪಂ ಸದಸ್ಯರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

    ಕೊರಟಗೆರೆ ಪಟ್ಟಣದ ಪಪಂ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆಯಿಂದ ಏರ್ಪಡಿಸಲಾಗಿದ್ದ 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ, ಶಂಕುಸ್ಥಾಪನೆ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಪದವಿ ಪೂರ್ವ ಕಾಲೇಜಿನ 4 ಕೋಟಿಯ ಒಳಾಂಗಣ ಕ್ರೀಡಾಂಗಣ 40 ದಿನದೊಳಗೆ ಉದ್ಘಾಟನೆ ಮಾಡ್ತಿನಿ. ಕ್ರೀಡಾಂಗಣ ಅಭಿವೃದ್ದಿಗೆ ಮತ್ತೆ 3 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಕೊರಟಗೆರೆ ಪಟ್ಟಣದ ಸರ್ವೆ ನಂ.181ರಲ್ಲಿ 5 ಎಕರೆ ಭೂಮಿಯಲ್ಲಿ 100 ಸೈಟ್ ವಿಂಗಡಿಸಿ ಹಂಚುವ ಕೆಲಸ ಮಾಡ್ತೀವಿ. ಪಪಂ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಬಡಜನರ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದರು.


    Provided by
    Provided by

    ಕಡ್ಡಾಯ ಸಿಸಿಟಿವಿಗೆ ಸೂಚನೆ:

    ರಾಜ್ಯದ ಪ್ರತಿ ತಾಲೂಕಿನ ಸಾರ್ವಜನಿಕ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಕೆಗೆ ಪೊಲೀಸ್ ಇಲಾಖೆಗೆ ಸರಕಾರ ಸೂಚಿಸಿದೆ. ಕೊರಟಗೆರೆ ಪಟ್ಟಣದ 28 ಕಡೆಗಳಲ್ಲೂ ಸಿಸಿ ಟಿವಿ ಅಳವಡಿಕೆಗೆ ಚಾಲನೆ ನೀಡಿದ್ದೇನೆ. ಸಿಸಿ ಟಿವಿ ಅಳವಡಿಕೆ ಪಪಂ, ಪುರಸಭೆ ಮತ್ತು ನಗರ ಸಭೆಗಳ ಜವಾಬ್ದಾರಿಯು ಆಗಿದೆ. ಕಾನೂನು ವಿರೋಧಿ ಚಟುವಟಿಕೆ ಮತ್ತು ಕ್ರೈಂ ಪ್ರಕರಣ ಬೇದಿಸಲು ಸಿಸಿ ಟಿವಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಎಸ್ಪಿ ಅಶೋಕ್, ಪಪಂ ಪಿಡಿ ಯೋಗಾನಂದ, ವಿಶೇಷಾಧಿಕಾರಿ ಎಸ್.ನಾಗಣ್ಣ, ತಹಶೀಲ್ದಾರ್ ಮಂಜುನಾಥ, ಪಪಂ ಮುಖ್ಯಾಧಿಕಾರಿ ಉಮೇಶ್, ಪಪಂ ಅಧ್ಯಕ್ಷೆ ಅನಿತಾ,ಉಪಾಧ್ಯಕ್ಷೆ ಹುಸ್ಮಪಾರೀಯ, ಸ್ಥಾಯಿಸಮಿತಿ ಅಧ್ಯಕ್ಷೆ ಹೇಮಾಲತ, ಸದಸ್ಯರಾದ ಬಲರಾಮಯ್ಯ, ಓಬಳರಾಜು, ನಂದೀಶ್,ಲಕ್ಷ್ಮೀನಾರಾಯಣ್, ಭಾರತಿ,ಕಾವ್ಯ ರಮೇಶ್, ಪುಟ್ಟನರಸಪ್ಪ ಸೇರಿದಂತೆ ಇತರರು ಇದ್ದರು.

    ಪಟ್ಟಣ ಪಂಚಾಯಿತಿ ಕಾರ್ಯಕ್ರಮದ ಹೈಲೇಟ್ಸ್..

    * ತುಮಕೂರು ಜಿಲ್ಲೆಯಲ್ಲಿ 24 ನಮ್ಮ ಕ್ಲಿನಿಕ್ ಆರಂಭ.
    * ಪಪಂಯನ್ನ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಕ್ರಮ.
    * 15 ವಾರ್ಡುಗಳಿಗೆ 25 ಕೋಟಿ ಅನುಧಾನದ ರೂಪರೇಷು.
    * ಪಪಂ ಸದಸ್ಯರಿಂದ ಗೃಹ ಸಚಿವರಿಗೆ ಹಲವು ಬೇಡಿಕೆ.
    * ಕ್ರೀಡಾಂಗಣ ಅಭಿವೃದ್ದಿಗೆ 3 ಕೋಟಿ ರೂ ಅನುಧಾನ.
    * 3 ಕೋಟಿಯ 10 ಕಾಮಗಾರಿಕೆ ಗೃಹ ಸಚಿವರಿಂದ ಚಾಲನೆ.
    * ಕೊರಟಗೆರೆ ಪಟ್ಟಣದಲ್ಲಿ ಮೊದಲ ನಮ್ಮ ಕ್ಲಿನಿಕ್ ಪ್ರಾರಂಭ.

    ಎತ್ತಂಗಡಿ ಆಗ್ತೀಯಾ ಹುಷಾರ್:

    ಪಪಂಯಿಂದ ಪೌರ ಕಾರ್ಮಿಕರಿಗೆ 2 ವರ್ಷದ ಹಿಂದೆ ನಿರ್ಮಾಣ ಮಾಡಿರುವ ನಿವೇಶನ ಹಂಚಿಕೆ ಮಾಡಿಲ್ಲ ಏಕೆ. ನಿವೇಶನ ಹಂಚಿಕೆ ಕಾರ್ಯಕ್ರಮ 15 ದಿನದೊಳಗೆ ಮಾಡದಿದ್ರೇ ಪಪಂ ಮುಖ್ಯಾಧಿಕಾರಿ ನೀನು ಎತ್ತಂಗಡಿ ಆಗ್ತಿಯಾ. ಬೇಗ ನಿವೇಶನ ಹಂಚಿಕೆ ಆಗ್ಬೇಕು ಅಷ್ಟೆ. ಗುತ್ತಿಗೆದಾರನ ಜೊತೆ ನಾನು ಮಾತನಾಡ್ತಿನಿ ಎಂದು ಪಪಂ ಮುಖ್ಯಾಧಿಕಾರಿ ಉಮೇಶ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.

    3 ಕೋಟಿಯ 10 ಕಾಮಗಾರಿಗೆ ಚಾಲನೆ:

    ಆರೋಗ್ಯ ಇಲಾಖೆಯ ನಮ್ಮ ಕ್ಲಿನಿಕ್, ತೋಟಗಾರಿಕೆ ಇಲಾಖೆ ಕಟ್ಟಡ, ಜೆಸಿಬಿ, ಆಟೋ ಟಿಪ್ಪರ್, ಡಸ್ಟ್ ಬೀನ್, ದಿನನಿತ್ಯದ ಮಾರುಕಟ್ಟೆ, ಹಳೇ ವಸತಿಗೃಹ ತೆರವು, ಕಲಾ ಮಂದಿರ, ಸಿಸಿಟಿವಿ, ಸಂತೆ ಮೈದಾನಕ್ಕೆ ಫೇನ್ಸಿಂಗ್ ಮತ್ತು ವಿಶೇಷ ಚೇತನರಿಗೆ ಸವಲತ್ತು ವಿತರಣೆ ಸೇರಿದಂತೆ 3ಕೋಟಿಗೂ ಅಧಿಕ ಅನುದಾನದಿಂದ 10ಕ್ಕೂ ಅಧಿಕ ಕಾಮಗಾರಿಗಳಿಗೆ ಗೃಹ ಸಚಿವ ಚಾಲನೆ ನೀಡಿದರು.

    ಗೃಹ ಸಚಿವರಿಗೆ ಪಪಂ ಸದಸ್ಯರ ಬೇಡಿಕೆ.

    ವೈಟ್ ಟಾಪಿಂಗ್ ಸಿಸಿ ರಸ್ತೆಯ ಪಾದಚಾರಿ ಮಾರ್ಗ, ಸ್ಮಶಾನದ ಟಿಎಸ್ ಪಿ ಅನುದಾನ ಬಳಕೆ, ರಂಗಮಂದಿರ, ಆಶ್ರಯ ನಿವೇಶನ ಹಂಚಿಕೆ, ಪೌರ ಕಾರ್ಮಿಕರಿಗೆ ಮನೆ ಹಸ್ತಾಂತರ, ವಿದ್ಯುತ್ ಚಿತಗಾರ, ಸ್ವಚ್ಚ ಸುವರ್ಣಮುಖಿ ನದಿ ಅಭಿಯಾನ, 20ಕುಂಟೆ ಜಮೀನು ಸರಕಾರಿ ಶಾಲೆ ಜಮೀನು ರಕ್ಷಣೆ ಮತ್ತು ಅಭಿವೃದ್ದಿಗೆ ಅನುಧಾನ ನೀಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರಗೆ ಪಟ್ಟಣ ಪಂಚಾಯಿತಿ ಸದಸ್ಯರು ಬೇಡಿಕೆ ಇಟ್ಟರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    ————————————

    admin
    • Website

    Related Posts

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026

    ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ

    April 6, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ನವದೆಹಲಿ: ಭಾರತದಲ್ಲಿ ಸಮಾನತೆಯನ್ನು ಹೋಗಲಾಡಿಸಿ, ಸಂವಿಧಾನವನ್ನು ನಾಶಪಡಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್…

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.