ರಾಜ್ಯ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ, ಇಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತುರ್ತು ಸಭೆ ನಡೆಸುವ ಮೂಲಕ ಮಳೆಯ ಮಾಹಿತಿ ಕಲೆ ಹಾಕಿದ್ದಾರೆ. ಕಂದಾಯ ಸಚಿವ ಕೃಷ್ಣಭೈರೇಗೌಡ ವಿಕಾಸಸೌಧದಲ್ಲಿ ಸಭೆ ನಡೆಸಿದ್ದು, ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ 10 ದಿನಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಹಿಂದೆ ಹೇಳಿದ್ದೆ ಜುಲೈ ತಿಂಗಳಲ್ಲಿ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಹೇಳಿತ್ತು. ಜೂನ್ ತಿಂಗಳಲ್ಲಿ 56 % ಮಳೆ ಕೊರತೆ ಇತ್ತು. ಒಂದು ವಾರದ ಹಿಂದೆ 29% ಇಳಿದಿತ್ತು. ನಿನ್ನೆಗೆ 19% ಮಳೆ ಕೊರತೆ ಕಡಿಮೆ ಆಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಬಂದ ಕಾರಣ ಶೇ 14% ಕೊರತೆ ಇದೆ.
ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಸ್ತಿ ಕೊರತೆ ಇದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಲ್ಲಿ ಕೊರತೆ ಇದೆ. ಒಂದು ವಾರದಲ್ಲಿ ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ರಾಜ್ಯದ ಬಹುತೇಕ ಮಳೆ ಕೊರತೆ ಇತ್ತು. ಕೆಲ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ. ಇನ್ನು ಜಲಾಶಯಗಳಲ್ಲಿ ಶೇ. 23% ಸಂಗ್ರಹ ಇತ್ತು. ನಿನ್ನೆಗೆ ಈಗ ಶೇ. 40% ಸಂಗ್ರಹ ಮುಟ್ಟಿದೆ. ಇವತ್ತಿಗೆ ಶೇಕಡಾ 50% ಸಂಗ್ರಹ ಆಗುವ ಸಾಧ್ಯತೆ ಇದೆ. ನಿನ್ನೆ ಒಂದೇ ದಿನಕ್ಕೆ 40 ಟಿಎಂಸಿ ನೀರು ಸಂಗ್ರಹ ಆಗಿದೆ.
ಶರಾವತಿ ಭಾಗದಲ್ಲಿ ವಿದ್ಯುತ್, ಸಮುದ್ರಕ್ಕೆ ಹೋಗುತ್ತದೆ. ಕಾವೇರಿ ಜಲಾಶಯಗಳಲ್ಲಿ, ಹೇಮಾವತಿ ಹಾರಂಗಿ, ಕಬಿನಿ 67, 228 ಕ್ಯೂಸೆಕ್ ಒಳಹರಿವು ಇದೆ. ಸ್ವಲ್ಪ ಪ್ರಮಾಣದಲ್ಲಿ ಹೊರ ಹರಿವು ಬಿಡಲಾಗಿದೆ. ಕಬಿನಿ ಮತ್ತು ಕೆಆರ್‌ಎಸ್‌ನಲ್ಲಿ ನೆಟ್ ಔಟ್ ಫ್ಲೋ ಇದೆ. 9 ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿದೆ. ಕೃಷ್ಣಾ ನದಿಗೆ 2, 61, 164 ಕ್ಯೂಸೆಕ್ಸ್ ಒಳಹರಿವು ಇದೆ. ಆಲಮಟ್ಟಿಯಲ್ಲಿ 1, 14, 445 ಕ್ಯೂಸೆಕ್ಸ್ ಒಳಹರಿವು ಇದೆ. ತುಂಗಭದ್ರಾ 47, 294 ಕ್ಯೂ ಒಳಹರಿವು ಇದೆ. ಮಲಪ್ರಭಾ ಕಡಿಮೆ ಇದೆ. ಘಟಪ್ರಭಾದಲ್ಲಿ ಹೆಚ್ಚಿನ ಒಳಹರಿವು ಇದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


