ರತನ್ ಟಾಟಾ ಶ್ರೀಮಂತ ಉದ್ಯಮಿ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ದೇಣಿಯಾಗಿ ನೀಡಿದ್ದಾರೆ. ಇದೊಂದೆ ಅಲ್ಲ ಪ್ರತಿ ಭಾರಿ ಭಾರತಕ್ಕೆ ಸಂಕಷ್ಟ ಎದುರಾದಾಗ ರತನ್ ಟಾಟಾ ನೆರವು ನೀಡಿದ್ದಾರೆ.ಆದರೆ ಇದೇ ಮೊದಲ ಬಾರಿಗೆ ರತನ್ ಟಾಟಾ ಸಾರ್ವಜನಿಕರಲ್ಲಿ ನರೆವು ಕೇಳಿದ್ದಾರೆ.
ಒಂದು ನಾಯಿಯ ಪ್ರಾಣ ಉಳಿಸಲು ರತನ್ ಟಾಟಾ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ರತನ್ ಟಾಟಾ ತಮ್ಮ ಇನ್’ಸ್ಟಾಗ್ರಾಂ ಖಾತೆ ಮೂಲಕ ಸಹಾಯ ಕೋರಿದ್ದಾರೆ. 7 ತಿಂಗಳ ನಾಯಿ ಮರಿಯೊಂದನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ನಾಯಿ ಪ್ರಾಣ ಉಳಿಸಲು ಯಾರಾದರೂ ನಾಯಿ ರಕ್ತ ದಾನ ಮಾಡಬೇಕಿದೆ. ತುರ್ತಾಗಿ ರಕ್ತದ ಅವಶ್ಯಕತೆ ಇದೆ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ.
ಜ್ವರ ಹಾಗೂ ಇತರ ಕೆಲ ಆರೋಗ್ಯ ಸಮಸ್ಯೆಯಿಂದ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಮಗೆ ಈಗ ಮುಂಬೈನಲ್ಲಿ ತುರ್ತಾಗಿ ನಾಯಿಯ ರಕ್ತದಾನ ಮಾಡುವರು ಬೇಕಾಗಿದ್ದಾರೆ. ರಕ್ತದಾನ ಮಾಡುವ ನಾಯಿ ಆರೋಗ್ಯವಾಗಿರಬೇಕ. 1 ರಿಂದ 8 ವರ್ಷದೊಳಗಿರಬೇಕು. ಕನಿಷ್ಠ 25 ಕೆಜಿ ಅಥವಾ ಅದಕ್ಕಿಂತ ಹೆಚ್ಚಿರಬೇಕು. ಸಂಪೂರ್ಣ ಲಸಿಕೆ ಪಡೆದಿರಬೇಕು. ಇತರ ಯಾವದೇ ಸಮಸ್ಯಗಳು ಇರಬಾರದು. ಕಳೆದ 6 ತಿಂಗಳಲ್ಲಿ ಜ್ವರ ಸೇರಿದಂತೆ ಇತರ ಸೋಂಕಿನಿಂದ ಬಳಲಿರಬಾರದು. ಈ ಮಾನದಂಡಗಳನ್ನು ಹೊಂದಿರುವ ಸಾಕು ನಾಯಿಗಳಿದ್ದರೆ ರಕ್ತದಾನ ಮಾಡಲು ತಕ್ಷಣವೇ ಸಂಪರ್ಕಿಸಿ ಎಂದು ರತನ್ ಟಾಟಾ ಮನವಿ ಮಾಡಿದ್ದಾರೆ.
View this post on Instagram
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: