ಹನೂರು: ಪುಣ್ಯ ಕ್ಷೇತ್ರ ಶ್ರೀ ಮಲೈ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರವು ದೇವಾಲಯದ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಸಿತು.
ಕಳೆದ 27 ದಿನದಲ್ಲಿ ಸಂಗ್ರಹ ಆಗಿರುವ ಮಾದಪ್ಪನ ಹುಂಡಿಯಲ್ಲಿ 2,43,65,775/-ಕೋಟಿ ರೂ. ನಗದು 62 ಗ್ರಾಂ. ಚಿನ್ನ ಮತ್ತು 2.512 ಕೆ.ಜಿ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿದೆ. ಅಲ್ಲದೆ 05 ವಿದೇಶಿ ಕರೆನ್ಸಿ ಹಾಗೂ 2 ಸಾವಿರ ಮುಖಬೆಲೆ 22 ನೋಟುಗಳು ದೊರೆತಿದೆ.
ಸಾಲೂರು ಬೃಹನಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀಗಳ ಉಪಸ್ಥಿತಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ.
ಶ್ರೀ ಮಲೈ ಮಹದೇಶ್ವರಬೆಟ್ಟದ ಖಾಸಗಿ ಬಸ್ ನಿಲ್ದಾಣ ವಾಣಿಜ್ಯ ಸಂಕೀರ್ಣ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮತ್ತು ಶ್ರೀ ಮಲೈ ಮಹದೇಶ್ವರಬೆಟ್ಟ ಪೊಲೀಸರ ಬಂದೋಬಸ್ತ್ ನಲ್ಲಿ ಬೆಳಿಗ್ಗೆ 6:30 ಗಂಟೆಗೆ ಪ್ರಾರಂಭವಾದ ಹುಂಡಿ ಹಣ ಎಣಿಕೆ ಕಾರ್ಯವು ಸಂಜೆ 7ರವರೆಗೂ ನಡೆಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296