ಮುಂಬೈ: ಚಿತ್ರತಾರೆಗಳಾದ ಅನುಷ್ಕಾ ಶರ್ಮಾ ಮತ್ತು ಅಮಿತಾಬ್ ಬಚ್ಚನ್ ಅವರಿಗೆ ಲಿಫ್ಟ್ ನೀಡುವ ವೇಳೆ ಹಿಂಬದಿ ಸವಾರರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಇಬ್ಬರು ಬೈಕ್ ಸವಾರರಿಗೆ ದಂಡ ವಿಧಿಸಲಾಗಿದೆ.
ಮುಂಬೈ ರಸ್ತೆಯಲ್ಲಿ ಬೈಕ್ ಸವಾರಿ ವೇಳೆ ಹೆಲ್ಮೆಟ್ ಧರಿಸಿದೇ ಇದ್ದ ಕಾರಣಕ್ಕಾಗಿ ಹಿಂಬದಿ ಸವಾರರಾಗಿದ್ದ ಅಮಿತಾಬ್ ಬಚ್ಚನ್ ಹಾಗೂ ಅನುಷ್ಕಾ ಇಬ್ಬರಿಗೂ ಅವರ ಬೈಕ್ ಸವಾರರ ಮೂಲಕ ದಂಡ ವಿಧಿಸಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶೂಟಿಂಗ್ ತಾಣಕ್ಕೆ ತೆರಳಲು ಅಮಿತಾಬ್ ಬಚ್ಚನ್ ಅಪರಿಚಿತರ ಬೈಕ್ ನಲ್ಲಿ ಹೆಲ್ಮೆಟ್ ಇಲ್ಲದೇ ಹಿಂಬದಿ ಸವಾರಿ ಮಾಡಿದ್ದರು. ಈ ಚಿತ್ರವನ್ನು ಸ್ವತಃ ಬಚ್ಚನ್ ಹಂಚಿಕೊಂಡಿದ್ದರು. ರಸ್ತೆಯಲ್ಲಿ ಸಂಚಾರ ದಟ್ಟಣೆಯಾದ ಕಾರಣ ಮರುದಿನ ಅನುಷ್ಕಾ ಶರ್ಮಾ ಕೂಡಾ ತಮ್ಮ ಬಾಡಿಗಾರ್ಡ್ ಬೈಕ್ ನಲ್ಲಿ ಹೆಲ್ಮೆಟ್ ಹಾಕದೆಯೇ ಸವಾರಿ ಮಾಡಿದ್ದರು. ಈ ಎರಡು ಚಿತ್ರಗಳಿಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಚಿತ್ರ ನಟರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಮಹತ್ವದ ಕ್ರಮಕೈಗೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


