ನಟ, ನಿರ್ದೇಶಕ ರಿಷಬ್ ಶೆಟ್ಟಿ ತಾವೇ ನಿರ್ದೇಶಿಸಿ ನಟಿಸಿರುವ “ಕಾಂತಾರ” ಸಿನೆಮಾ ಕಳೆದ ವರ್ಷ ಬಿಡುಗಡೆಯಾಗಿ ಭಾರೀ ಯಶಸ್ಸನ್ನು ಪಡೆಯಿತು.
ಸದ್ಯ ಅವರು ಈ ಚಿತ್ರದ ಪ್ರಿಕ್ವೆಲ್ ಚಿತ್ರೀಕರಣದಲ್ಲಿದ್ದು, ಕುತೂಹಲಕರ ಮಾಹಿತಿಯೊಂದು ಹೊರಬಿದ್ದಿದೆ. ಇತ್ತೀಚಿನ ಮಾಹಿತಿ ಪ್ರಕಾರ ರಿಷಬ್ ಶೆಟ್ಟಿ ಪ್ರಿಕ್ವೆಲ್ ಗೆ ಹೆಚ್ಚು ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಕಾಂತಾರ ಚಿತ್ರಕ್ಕೆ 4 ಕೋಟಿ ರೂ. ತೆಗೆದುಕೊಂಡಿರುವ ರಿಷಬ್ ಶೆಟ್ಟಿ, ಪ್ರೀಕ್ವೆಲ್ ಗೆ 100 ಕೋಟಿ ರೂ. ಪಡೆಯಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ರಿಷಬ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.


