ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಅವರು ಭೇಟಿ ನೀಡಿದರು. ಅಕ್ಷರಧಾಮದಲ್ಲಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅತಿಥಿಗಳನ್ನು ಸ್ವಾಗತಿಸಿದರು.
ಆತಿಥ್ಯದ ಸಂಕೇತವಾಗಿ ರುದ್ರಾಕ್ಷಿ, ಭಗವದ್ಗೀತೆಯ ಪ್ರತಿ ಮತ್ತು ಹನುಮಾನ್ ಚಾಲೀಸಾ ನೀಡಿ ಗೌರವಿಸಲಾಯಿತು. ರಿಷಿ ಸುನಕ್ ದಂಪತಿ, ದೇವಸ್ಥಾನದಲ್ಲಿ ಆರತಿ ಮಾಡಿದರು. ಅಕ್ಷರಧಾಮದ ಸಂತರನ್ನು ಭೇಟಿ ಮಾಡಿ ಕೆಲ ಹೊತ್ತು ಸಮಾಲೋಚನೆ ನಡೆಸಿದರು.


