ಕಾಂಗ್ರೆಸ್ ಗೆ ಬರದಿದ್ದರೇ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಮಂತ್ರಿಯೊಬ್ಬರಿಗೆ ಡಿ.ಕೆ ಶಿವಕುಮಾರ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಯಾವ ಸಚಿವರೂ ಸಿಡಿ ಬೆದರಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಮೇಶ್ ಜಾರಕಿಹೊಳಿಗೆ ಮಾಹಿತಿ ಇರಬಹುದು ಇದು ಡಿಜಿಟಲ್ ಯುಗವಾದ್ದರಿಂದ ಹೊರ ಬರುತ್ತಿರಬಹುದು. ಆದರೆ ನಮ್ಮ ಯಾವ ಮಂತ್ರಿಗಳೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ ಎಂದರು.
ಸಿಎಂ ತಾರತಮ್ಯದಿಂದ ಸಚಿವ ನಾರಾಯಣಗೌಡ ಪಕ್ಷ ಬಿಡುತ್ತಾರೆಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಇದು ಕೇವಲ ಊಹಾಪೋಹ, ಇಂತಹ ಸುಳ್ಳು ಸುದ್ಧಿಗಳ ಬಗ್ಗೆ ನಾನು ಉತ್ತರಿಸುವುದಿಲ್ಲ ಎಂದರು.
ರೈತರ ಕುಟುಂಬಗಳಿಗೆ ಕೃಷಿ ಆದಾಯ ಸಾಕಾಗೋದಿಲ್ಲ. ಹಾಗಾಗಿ ರೈತರ ಕುಟುಂಬಗಳಿಗೆ ವಿದ್ಯಾ ನಿಧಿ ಯೋಜನೆ ಮಾಡಲಾಗಿದೆ. ಸಂವಿಧಾನದ ಬದ್ದವಾಗಿ ಜನರನ್ನು ಪುಸಲಾಯಿಸಲಾಗಿದೆ. ಮಹಿಳೆಯರು ಹಾಗೂ ಯುವಕರಿಗೆ ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ಈ ನಾಡನ್ನು ಕಟ್ಟಲು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೃಷಿ ಕಾರ್ಮಿಕ ಮಹಿಳೆಯರಿಗೆ ಪ್ರತಿಯೊಂದು ಕುಟುಂಬಕ್ಕೆ 1 ಸಾವಿರ ರೂಪಾಯಿ ನೀಡಲಾಗುವುದು. ನಾವು ಬಡತನವನ್ನು ನೋಡಿದ್ದೇವೆ, ಜನರನ್ನು ಹತ್ತಿರದಿಂದ ಹೋಗಿ ಬಂದವರು. ಬಡವರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


