ಕೊರಟಗೆರೆ: ರಾಜ್ಯದ ಗೃಹ ಸಚಿವರ ಆದೇಶದಂತೆ ತಾಲೂಕಿನ 6 ಹೋಬಳಿಯ ಕೇಂದ್ರಗಳನ್ನ ಸಮಗ್ರ ಅಭಿವೃದ್ಧಿಗಾಗಿ ತಲಾ ಎರಡುವರೆ ಕೋಟಿ ಅನುದಾನ ನೀಡಿದ್ದು, ರಸ್ತೆ ಅಗಲಿಕರಣ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತುಮಕೂರು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು ಜಿ. ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಕೋಳಾಲ ಹೋಬಳಿ ಕೇಂದ್ರದ ಗ್ರಾ.ಪಂ.ಯಲ್ಲಿ ಸದಸ್ಯರ ಸಭೆ ಮಾಡಿ ನಂತರ ಕಾಮಗಾರಿ ನಡೆಯುವ ಸ್ಥಳವನ್ನ ಪರಿಶೀಲಿಸಿ ಮಾತನಾಡಿದರು.
ಈಗಾಗಲೇ ಶಾಸಕರ ನಿಧಿಯಾಗಿ ಮುಖ್ಯಮಂತ್ರಿಗಳು 50 ಕೋಟಿ ರೂ ಅನುದಾನವನ್ನ ಬಿಡುಗಡೆ ಮಾಡಿದ್ದು, ಗೃಹ ಸಚಿವರ ಮಾರ್ಗದರ್ಶನ ಹಾಗೂ ಅವರ ಆದೇಶದಂತೆ ತಾಲೂಕಿನ ಹೊಳವನಹಳ್ಳಿ, ಕೋಳಾಲ, ಕಸಬಾ, ಪುರವಾರ, ತೋವಿನಕೆರೆ, ಚಿಕ್ಕತೊಟ್ಲುಕೆರೆ ಹೋಬಳಿ ಕೇಂದ್ರಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಪುಟ್ಪಾತ್, ರಸ್ತೆ ಮಧ್ಯ ವಿನ್ಯಾಸವಾದ ವಿದ್ಯುತ್ ದೀಪ ಅಳವಡಿಸಿ ಪಟ್ಟಣದ ಮಾದರಿಯಂತೆ ಮಾಡಲು ಈಗಾಗಲೇ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
50 ಕೋಟಿ ಅನುದಾನದಲ್ಲಿ ರಸ್ತೆ, ಆಸ್ಪತ್ರೆ, ಅಂಗನವಾಡಿ, ಶಾಲಾ ಕಾಲೇಜು ಸೇರಿದಂತೆ ಗೃಹ ಸಚಿವರ ಆಪೇಕ್ಷೆಯಂತೆ ಒಂದು ಆಸ್ಪತ್ರೆಗೆ 65 ಲಕ್ಷದಂತೆ ನಮ್ಮ ಜಿಲ್ಲೆಗೆ 135 ಹೊಸ ಆಸ್ಪತ್ರೆಗಳು ಮಂಜೂರು ಮಾಡಿದ್ದಾರೆ. ಗ್ರಾಪಂ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಯ ಕಟ್ಟಡಗಳನ್ನ ನವೀಕರಣ ಮಾಡುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಕ್ರಿಯಾ ಯೋಜನೆಯನ್ನ ರೂಪಿಸಲಾಗಿದ್ದು ಇನ್ನೂ 6 ತಿಂಗಳಲ್ಲಿ ಎಲ್ಲಾ ಕಾಮಗಾರಿಗಳನ್ನ ಮುಗಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಪಣ ತೊಟ್ಟಿದ್ದು, ಗ್ರಾ.ಪಂ. ಸದಸ್ಯರು ಹಾಗೂ ಸಹಕರಿಸಿ ಎಂದರು.
ಮುಲಾಜಿಲ್ಲದೇ ಅಕ್ರಮ ಕಟ್ಟಡ ತೆರವು:
ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಬರುವ 6 ಹೋಬಳಿ ಕೇಂದ್ರದಲ್ಲಿ ಚರಂಡಿ, ರಸ್ತೆ, ಹಾಗೂ ಬೀದಿ ದೀಪ ಅಳವಡಿಸಲು ಸಾರ್ವಜನಿಕರು ಹಾಗೂ ಗ್ರಾಪಂ ಸರ್ವ ಸದಸ್ಯರು ಸಹಕರಿಸಬೇಕು. ಹೋಬಳಿ ಕೇಂದ್ರದಲ್ಲಿ ಒಂದು ಬದಿಯಲ್ಲಿ ಎಂಟೂವರೆ ಮೀಟರ್ ಮತ್ತು ಇನ್ನೊಂದು ಬದಿಯಲ್ಲಿ ಎಂಟೂವರೆ ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡಲಿದ್ದು, ರಸ್ತೆ ಅಗಲಿಕರಣ ಮಾಡುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಸಾರ್ವಜನಿಕರ ಅಗಲಿಕರಣ ಮಾಡಲು ಸಹಕರಿಸಿ. ಒಂದು ವೇಳೆ ಸಹಕಾರ ನೀಡದಿದ್ದರೆ ಮೂಲಾಜಿಲ್ಲದೆ ಅಕ್ರಮ ಕಟ್ಟಡಗಳನ್ನ ತೆರವು ಮಾಡಬೇಕಾಗುತ್ತದೆ ಇನ್ನೂ ಎರಡು ಮೂರು ದಿನಗಳಲ್ಲಿ ಮಾರ್ಕಿಂಗ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಓ ಪ್ರಭು ಜಿ. ಅವರ ಜೊತೆ ಕೊರಟಗೆರೆ ಇಓ ಅಪೂರ್ವ, ಜಿ.ಪಂ. ಎಇಇ ದಯಾನಂದ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಾಂತರಾಜು, ನರೇಗಾ ಎಇಇ ಗುರುಮೂರ್ತಿ, ಪಿಡಬ್ಲೂಡಿ ಎಇಇ ದೀಪಕ್, ತಂಡ ಹೊಳವನಹಳ್ಳಿಯಲ್ಲಿ ನಡೆಯುವ ಕಾಮಗಾರಿ ಸ್ಥಳವನ್ನ ಪರಿಶೀಲನೆ ಮಾಡಿದರು.
ಇದೆ ಸಂದರ್ಭದಲ್ಲಿ ಪಿಡಿಒ ರಂಗನಾಥ್, ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಉಮೇಶ್ ಸದಸ್ಯರಾದ ರವಿಕುಮಾರ್, ಶಂಶಾದ್, ನಜೀರ್, ಮುಖಂಡರಾದ ರಾಮಾಂಜನಯ್ಯ, ಕುಮಾರ್, ಉಮೇಶ್, ಶಿವಣ್ಣ, ಸುರೇಶ್, ಹನುಮಂತರಾಜು ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


