ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಬುಧವಾರ ಟಾಸ್ ಗೆದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗಿನ ಟಿವಿಯಲ್ಲಿ ಹಾರ್ದಿಕ್ ಪಾಂಡ್ಯ ಮಾತನಾಡುತ್ತಿರುವ ವೇಳೆ ರೋಹಿತ್ ಶರ್ಮ ಅಭಿಮಾನಿಗಳು ಚಪ್ಪಲಿಗಳನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ಸಿಪ್ ನಿಂದ ಇಳಿಸಿದ ಬಳಿಕ ರೋಹಿತ್ ಶರ್ಮ ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಅದಾಗ್ಯೂ ಇತ್ತೀಚಿಗೆ ನಡೆದ ಮ್ಯಾಚ್ ಒಂದರಲ್ಲಿ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರನ್ನು ಫೀಲ್ಡಿಂಗ್ ನಲ್ಲಿ ನಿಲ್ಲಿಸುವ ಸಂದರ್ಭದಲ್ಲಿ ಆದ ಗೊಂದಲಗಳಿಂದ ರೋಹಿತ್ ಶರ್ಮಾ ಅಭಿಮಾನಿಗಳು ಪಾಂಡ್ಯ ಮೇಲೆ ಸಾಕಷ್ಟು ಕುಪಿತಗೊಂಡಿದ್ದರು.
ಆದರೆ ರೋಹಿತ್ ಶರ್ಮ ಅವರಿಗೆ ಕ್ಯಾಪ್ಟನ್ಸಿ ಬಿಟ್ಟುಕೊಡಲು ಮನಸ್ಸಿಲ್ಲದಿದ್ದರೂ ಅವರನ್ನು ಕ್ಯಾಪ್ಟನ್ಸಿ ಇಂದ ಇಳಿಸಲಾಗಿದೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ರೋಹಿತ್ ಶರ್ಮ ಈ ಕುರಿತು ಎಲ್ಲಿಯೂ ಸಹ ತಮ್ಮ ಬೇಸರ ವ್ಯಕ್ತಪಡಿಸಿಲ್ಲ.
ನಾವು ಸಕಾರಾತ್ಮಕವಾಗಿದ್ದೇವೆ ಮತ್ತು ಸವಾಲನ್ನು ಎದುರು ನೋಡುತ್ತಿದ್ದೇವೆ. ಎಲ್ಲಾ ಆಟಗಾರರೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ, ಆಟಗಾರರನ್ನು ಚೆನ್ನಾಗಿ ಅರಿತು ಕೊಳ್ಳುವುದು ಮುಖ್ಯ ಎಂದು ಹಾರ್ದಿಕ್ ಟಾಸ್ ಗೆದ್ದ ಬಳಿಕ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296