ತಿಪಟೂರು: ಜಗತ್ತಿನಾದ್ಯಂತ ರೋಟರಿಸಂಸ್ಥೆ ಹಲವಾರು ಸಮಾಜಸೇವೆ ಮಾಡುವ ಮೂಲಕ ಸಮಾಜದ ಏಳಿಗೆಗೆ ಕೈ ಜೋಡಿಸಿದೆ, ಸೇವಾ ಮನೋಭಾವ ಹೊಂದಿರುವವರಿಗೆ ಉತ್ತಮ ವೇದಿಕೆಯಾಗಿದೆ ಎಂದು ನೂತನ ರೋಟರಿ ಅಧ್ಯಕ್ಷ ಗವಿಯಣ್ಣ ತಿಳಿಸಿದರು.
ನಗರದ ಶ್ರೀಗುರು ಕನ್ವೆಷನ್ ಹಾಲ್ ನಲ್ಲಿ ಆಯೋಜಿಸಿದ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾಪಾಲಕರಾದ ಎನ್.ಎಸ್.ಮಹದೇವ ಪ್ರಸಾದ್ ನೂತನ ಅಧ್ಯಕ್ಷರಿಗೆ ಕಾಲರ್ ಅರ್ಪಿಸುವ ಮೂಲಕ ಪದಗ್ರಹಣ ನೆರವೇರಿಸಿದರು
ನೂತನ ಅಧ್ಯಕ್ಷರಾದ ಅಧಿಕಾರ ಸ್ವೀಕರಿಸಿದ ಗವಿಯಣ್ಣ ಮಾತನಾಡಿ, ರೋಟರಿ ಸಂಸ್ಥೆ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುವ ಮೂಲಕ ಸೇವಾಮನೋಭಾವ ಉಳ್ಳವರಿಗೆ ಉತ್ತಮ ವೇದಿಕೆ ನೀಡಿದೆ, ಅತ್ಯಂತ ಬಡ ಕುಟುಂಬದಲ್ಲಿ ಬೆಳೆದ ನಾನು ರೋಟರಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸವಮಾಡುವ ಅವಕಾಶ ಕಲ್ಪಸಿರುವುದಕ್ಕೆ ಹೆಮ್ಮೆಎನ್ನಿಸುತ್ತಿದೆ. ರೋಟರಿ ಸಂಸ್ಥೆ ಸಮಾಜಮುಖಿಯಾಗಿ ಮಾನವೀಯ ನೆಲಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ನಾವು ಸಂಪಾದಿಸಿದ ಗಳಿಕೆಯಲ್ಲಿ ಸಮಾಜಕ್ಕೆ ವಿನಿಯೋಗಿಸುವ ಮೂಲಕ ಸೇವೆ ಮಾಡುವ ಅವಕಾಶ ದೊರೆಯುತ್ತದೆ, ತಿಪಟೂರು ರೋಟರಿ ಸಂಸ್ಥೆ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಜೊತೆಗೆ, ಬಡವರ ಆರೋಗ್ಯಸೇವೆ ಒತ್ತುನೀಡಿದ್ದು, ಮಾರನಗೆರೆ ಕೆರೆ ಅಭಿವೃದ್ಧಿ ಪಡಿಸಿ, ಜಲಮೂಲಗಳ ಕಾಯಕಲ್ಪಕ್ಕೆ ಮುಂದಾಗಿರುವುದು ಉತ್ತಮ ಕೆಲಸ. ಹಿಂದಿನ ವರ್ಷದ ರೋಟರಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಹಾಗೂ ವನಿತ ರವರ ಉತ್ತಮಕೆಲಸ ಮಾಡಿದ್ದು,ಹಿಂದಿನಿಂದಲೂ ನಡೆದುಕೊಂಡ ಮೇಲ್ಪಂಕ್ತಿಯಂತೆ ಉತ್ತಮವಾಗಿ ಕೆಲಸಮಾಡುವುದಾಗಿ ತಿಳಿಸಿದರು.
ಜಿಲ್ಲಾಪಾಲಕರಾದ ಎನ್.ಎಸ್. ಮಹದೇವಪ್ರಸಾದ್ ಮಾತನಾಡಿ, ರೋಟರಿ ಸಂಸ್ಥೆ ಸೇವೆ ಮಾಡಲು ಉತ್ತಮ ಅವಕಾಶ ನೀಡುತ್ತದೆ, ಪಲ್ಸ್ ಪೋಲಿಯೋ ಯಶಸ್ವಿಯಲ್ಲಿ ಸರ್ಕಾರಗಳೊಂದಿಗೆ ಕೈಜೋಡಿಸಿ ಯಶಸ್ಸುಗಳಿಸಿದೆ, ಭಾರತದಲ್ಲಿ ನಮ್ಮ ಸಂಸ್ಥೆ ಆರೋಗ್ಯಸೇವೆ ಶೈಕ್ಷಣಿಕ ನೆರವು ನೀಡುವ ಜೊತೆಗೆ , ನೀರಿನ ಅಗತ್ಯತೆ ಅರಿವು ಮೂಡಿಸುವ ಜೊತೆಗೆ ಮಳೆಕೊಯ್ಲು, ಜನಮೂಲಗಳ ರಕ್ಷಣೆಗೆ ಆದ್ಯತೆ ನೀಡುತ್ತಿದೆ, ಕೋಟಿವೃಕ್ಷ ಅಭಿಯಾನ ಆಯೋಜಿಸಿದ ಸಸ್ಯಗಳನ್ನ ಬೆಳೆಸಿ ಸಂರಕ್ಷಣೆ ಮಾಡುವ ಜೊತೆಗೆ, ಬಡವರ ಜಮೀನಿನಲ್ಲಿ ರೋಟರಿ ಸಂಸ್ಥೆಯಿಂದ ತೆಂಗಿನ ಸಸಿಬೆಳೆಸಿ ನಿರ್ವಾಹಣೆ ಮಾಡುವ ಜೊತೆಗೆ, ಪ್ರಭುದ್ದವಾದಾಗ, ರೈತರಿಗೆ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಪಾಲಕರಾದ ರೋ.ಎನ್.ಎಸ್ ಮಹದೇವಪ್ರಸಾದ್, ಜಿಲ್ಲಾಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಕೃಷ್ಣಪ್ರಸಾದ್, ನಿಕಟಪೂರ್ವ ಕಾರ್ಯದರ್ಶಿ ವನಿತಾಪ್ರಸನ್ನ, ರೋಟರಿ ನೂತನ ಕಾರ್ಯದರ್ಶಿ ಡಿ.ಅಶೋಕ್ ಕುಮಾರ್, ರೋಟರಿ ಪಬ್ಲಿಕ್ ಇಮೇಜ್ ಡೈರೆಕ್ಟರ್ ಪ್ರಕಾಶ್ ಕ್ಯಾತನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA