nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾರವಾರ: ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ: ಅಪರ ಜಿಲ್ಲಾಧಿಕಾರಿ

    February 20, 2026

    ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!

    February 19, 2026

    ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ

    February 19, 2026
    Facebook Twitter Instagram
    ಟ್ರೆಂಡಿಂಗ್
    • ಕಾರವಾರ: ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ: ಅಪರ ಜಿಲ್ಲಾಧಿಕಾರಿ
    • ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!
    • ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ
    • ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ
    • ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್
    • ಸುಳ್ಳು ಅನುಭವ ಪತ್ರ ನೀಡಿದ ಆರೋಪ: 6 ಮಂದಿ ವಿರುದ್ಧ ಕೇಸ್
    • ತುಮಕೂರು: ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ
    • ಸ್ವಚ್ಛತೆಯ ರಾಯಭಾರಿಗಳಾದ ಬೊಮ್ಮಲದೇವೀಪುರ ಪಂಚಾಯಿತಿಯ ಮಹಿಳಾ ಪೌರ ಕಾರ್ಮಿಕರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಮಾಜಕ್ಕೆ ದುಡಿಯುವವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ
    ಕೊರಟಗೆರೆ July 10, 2025

    ಸಮಾಜಕ್ಕೆ ದುಡಿಯುವವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ

    By adminJuly 10, 2025No Comments2 Mins Read
    koratagere

    ಕೊರಟಗೆರೆ : ಸಮಾಜಕ್ಕೆ ದುಡಿಯಬೇಕು ಎಂಬ ತುಡಿತ ಇದ್ದವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ. ಅದೆಷ್ಟೋ ಮಂದಿ ಹಿರಿಯರ ಸೇವಾ ಮನೋಭಾವದಿಂದ ರೋಟರಿ ಸಂಸ್ಥೆ ಗಟ್ಟಿಯಾಗಿ ಬೆಳೆದಿದ್ದು, ಪ್ರಪಂಚದಾದ್ಯಂತ ತನ್ನ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದೆ ಎಂದು ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ತಾಲ್ಲೂಕಿನ ಸಿಎನ್ ದುರ್ಗಾ ಹೋಬಳಿ ಸಿದ್ದರಬೆಟ್ಟ ಶ್ರೀಮಠದ ಸಮುದಾಯ ಭವನದಲ್ಲಿ ರೋಟರಿ ಸಿದ್ದರಬೆಟ್ಟ– 3192 (2025-26)ನೇ ಸಾಲಿನ ಅಧ್ಯಕ್ಷರು, ನಿರ್ದೇಶಕರು ಮತ್ತು ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.


    Provided by
    Provided by

    2024–25ನೇ ಸಾಲಿನ ಅಧ್ಯಕ್ಷ ರಘು ತನ್ನ ಅವಧಿಯಲ್ಲಿ ರೋಟರಿ ಸಂಸ್ಥೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಾರೆ. ಕಾಮಧೇನು ಯೋಜನೆಯಿಂದ 220ಕ್ಕೂ ಹೆಚ್ಚು ಬಡ ಕುಟುಂಬ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಿದೆ. ಬೋರ್‌ ವೆಲ್ ರಿಚಾರ್ಜ್, ಇತ್ತೀಚಿಗೆ ಪ್ರಾರಂಭಿಸಿದ ಕೊರಟಗೆರೆ ರೇಣುಕಾ ಆಸ್ಪತ್ರೆ ಸಹಯೋಗದಲ್ಲಿ ಡಯಾಲಿಸಿಸ್ ಕೇಂದ್ರದಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಿದ್ದು, ನೂತನ ಪದಾಧಿಕಾರಿಗಳು ಈ ಕಾರ್ಯಕ್ರಮಗಳನ್ನು ಮುಂದುವರೆಸಬೇಕಿದೆ ಎಂದು ಹೇಳಿದರು.

    ನಿಕಟ ಪೂರ್ವ ಜಿಲ್ಲಾ ರಾಜ್ಯಪಾಲ ಡಾ.ಎನ್.ಎಸ್ ಮಹದೇವ ಪ್ರಸಾದ್ ಮಾತನಾಡಿ, ರೋಟರಿ ಸಂಸ್ಥೆ ಪೋಲಿಯೋ ಮುಕ್ತ ಭಾರತವನ್ನಾಗಿಸಲು ಪ್ರಯತ್ನಿಸಿ ಮತ್ತು ಕೋವಿಡ್ ಸಮಯದಲ್ಲಿ ರೋಟರಿ ಸಂಸ್ಥೆ ತನ್ನದೇ ಆದ ಕಾರ್ಯಸೂಚಿ ಹೊಂದಿ ಯಶಸ್ವಿಯಾಗಿದೆ. ರಘು ಅವಧಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸಿ ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.

    ಸಿದ್ದರಬೆಟ್ಟ ರೋಟರಿ ನೂತನ ಅಧ್ಯಕ್ಷ ಬಾಲಾಜಿ ದರ್ಶನ್ ಮಾತನಾಡಿ, ನನ್ನ ಅವಧಿಯಲ್ಲಿ ಸರ್ಕಾರಿ ಶಾಲೆಯಲ್ಲಿನ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಡಿಜಿಟಲ್ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಮಾದರಿ ಶಾಲೆಯನ್ನಾಗಿಸುವ ಗುರಿ ಹೊಂದಿದ್ದೇನೆ. ಸಸ್ಯಕಾಶಿ ಸಿದ್ದರಬೆಟ್ಟದ ಅರಣ್ಯ ಪ್ರದೇಶದಲ್ಲಿ ಅನೈರ್ಮಲ್ಯ ಕಂಡು 300 ಕ್ಕೂ ಹೆಚ್ಚಿನ ಯುವಕರ ಜೊತೆಗೂಡಿ ಸ್ವಚ್ಚತೆ ಕಾರ್ಯದಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಂ.ಎಸ್ ಉಮೇಶ್, ಸಹಾಯಕ ಗವರ್ನರ್ ಜಿ.ಎನ್.ಜನಾರ್ಧನ್, ವಲಯ ರಾಯಭಾರಿ ಪ್ರಸನ್ನಕುಮಾರ್, ವಲಯ ಕಾರ್ಯದರ್ಶಿ ಎಂ.ಜಿ ಶ್ರೀನಿವಾಸಮೂರ್ತಿ, ಸಮ್ಮೇಳನದ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ನಿರ್ಗಮನ ಅಧ್ಯಕ್ಷ ರಘು ಕೆ.ಎನ್, ಕಾರ್ಯದರ್ಶಿ ಶಿವಕುಮಾರ್ ಕೆ.ಎನ್, ದರ್ಶನ್ ಕೆ.ಎಲ್, ರಿತು ದರ್ಶನ್, ರೂಪ ರಘು ಸೇರಿದಂತೆ ಇತರರು ಇದ್ದರು.

    ಅಧ್ಯಕ್ಷರು- ನಿರ್ದೇಶಕ –ಪದಾಧಿಕಾರಿಗಳ ಪದಗ್ರಹಣ:

    2025–26ನೇ ಸಾಲಿನ ರೋಟರಿ ಸಿದ್ದರಬೆಟ್ಟ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಬಾಲಾಜಿ ದರ್ಶನ್ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಸಚಿನ್, ಪವನ್, ಟಿ.ಎನ್ ಸುಂದರ್, ಅರುಣ್ ಕೆ.ಎಸ್ ಸೇರಿ ಹಲವರನ್ನು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಿಕಟ ಪೂರ್ವ ಜಿಲ್ಲಾ ರಾಜ್ಯಪಾಲ ಡಾ.ಎನ್.ಎಸ್ ಮಹದೇವ ಪ್ರಸಾದ್ ಪದವಿ ಪ್ರಧಾನ ಮಾಡಿದರು.

    ಬೋರ್‌ವೆಲ್ ರಿಚಾರ್ಜ್ ಕಾರ್ಯಕ್ರಮಕ್ಕೆ ಚಾಲನೆ:

    ಅಂತರ್ಜಲ ಮಟ್ಟ ವೃದ್ಧಿಗೆ ರೋಟರಿ ಸಂಸ್ಥೆಯು ಬೋರ್‌ವೆಲ್ ರಿಚಾರ್ಜ್ ಯೋಜನೆಯಿಂದ ರೈತನ ಬದುಕು ಬಂಗಾರವಾಗಲಿದೆ ಎಂಬ ಹಿತದೃಷ್ಠಿಯಿಂದ ರೋಟರಿ ಸಂಸ್ಥೆ ಹಮ್ಮಿಕೊಂಡಿದ್ದು ಬೋರ್‌ವೆಲ್ ರಿಚಾರ್ಜ್ ಕಾರ್ಯಕ್ರಮಕ್ಕೆ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ರಾಜ್ಯಪಾಲ ಡಾ.ಮಹದೇವ ಪ್ರಸಾದ್, ನೂತನ ಅಧ್ಯಕ್ಷ ಬಾಲಾಜಿ ದರ್ಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಿದ್ದೇನೆ. ಡಯಾಲಿಸಿಸ್ ಶಿಬಿರ, ಕಾಮಧೇನು ಯೋಜನೆ, ಅಂತರ್ಜಲ ಮಟ್ಟ ವೃದ್ಧಿಗೆ ಬೋರ್‌ವೆಲ್ ರಿಚಾರ್ಜ್ ಕಾರ್ಯಕ್ರಮ ಈಗಾಗಲೇ ತಾಲ್ಲೂಕಿನಲ್ಲಿ ಯಶಸ್ವಿ ಕಂಡಿದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ರೋಟೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ರಘು ಕೆ.ಎನ್. ನಿರ್ಗಮನ ಅಧ್ಯಕ್ಷ, ಸಿದ್ದರಬೆಟ್ಟ ರೋಟರಿ ತಿಳಿಸಿದರು.

    ವರದಿ : ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    February 19, 2026

    ಸ್ವಚ್ಛತೆಯ ರಾಯಭಾರಿಗಳಾದ ಬೊಮ್ಮಲದೇವೀಪುರ ಪಂಚಾಯಿತಿಯ ಮಹಿಳಾ ಪೌರ ಕಾರ್ಮಿಕರು

    February 19, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಕಾರವಾರ: ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ: ಅಪರ ಜಿಲ್ಲಾಧಿಕಾರಿ

    February 20, 2026

    ಕಾರವಾರ:  ಜಿಲ್ಲೆಯಲ್ಲಿ ಘಟಿಸುವ ಪ್ರತಿಯೊಂದು ಜನನ ಮತ್ತು ಮರಣ ಘಟನೆಗಳನ್ನು 21 ದಿನಗಳ ಒಳಗೆ ಕಡ್ಡಾಯವಾಗಿ ಶೇ.100 ರಷ್ಟು ನೋಂದಣಿ…

    ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!

    February 19, 2026

    ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ

    February 19, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.