ಬೆಂಗಳೂರು: ಅಪ್ಪ- ಮಗನಿಂದ ವ್ಯಕ್ತಿಯೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಆರ್ ಆರ್ ನಗರದ ಜವರೇಗೌಡನಗರದಲ್ಲಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ.
ಜವರೇಗೌಡ ನಗರದ ರಾಮದಾಸ್ 7 ನೇ ಕ್ರಾಸ್ ನಲ್ಲಿ ಮೋಹನ್ ಗೌಡ ಹಾಗೂ ಪಕ್ಕದಲ್ಲಿ ಕೃಷ್ಣಪ್ಪ ಎನ್ನುವವರ ಮನೆ ಇದೆ. ಕೃಷ್ಣಪ್ಪ ಟಾಟಾ ಏಸ್ ಗಾಡಿ ತಂದು ಅವರ ಮನೆ ಮುಂದೆ ಪಾರ್ಕ್ ಮಾಡಿದ್ದಾಗ, ಗಾಡಿ ಮೋಹನ್ ಗೌಡ ಅವರ ಮನೆಯ ಸೀಟ್ ಗೆ ಟಚ್ ಆಗಿತ್ತು. ಈ ಹಿನ್ನಲೆ ಪಕ್ಕದ ಮನೆಯ ಮೋಹನ್ ಗೌಡ್ ಹಾಗೂ ಆತನ ಮಗ ತೇಜಸ್ ಗೌಡ ಎಂಬುವವರು ಕಿರಿಕ್ ಮಾಡಿದ್ದರು.
ಟಾಟ್ ಏಸ್ ನಮ್ಮ ಮನೆ ಸೀಟ್ ಗೆ ಟಚ್ ಆಗಿದೆ ಎಂದು ಕೃಷ್ಣಪ್ಪ ಜೊತೆ ಗಲಾಟೆ ಶುರು ಮಾಡಿದ ಅಪ್ಪ ಮತ್ತು ಮಗ. ಈ ವೇಳೆ ಏಕಾಏಕಿ ಕೃಷ್ಣಪ್ಪ ಮೇಲೆ ಅಪ್ಪ ಮೋಹನ್ ಗೌಡ, ಮಗ ತೇಜಸ್ ಗೌಡ ಮನಸೋ ಇಚ್ಚೆ ಹಲ್ಲೆ ನಡೆಸಿ ಕೃಷ್ಣಪ್ಪನನ್ನು ಥಳಿಸಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


