ತುರುವೇಕೆರೆ ವಿಧಾನಸಭಾ ಕ್ಷೇತ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಹಟ್ಟಯ್ಯ ಎನ್. ಅವರನ್ನು ಆಯ್ಕೆ ಮಾಡಲಾಯಿತು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎನ್. ಮೂರ್ತಿ ಅವರು ಅಭ್ಯರ್ಥಿಯನ್ನು ಘೋಷಿಸಿದರು. ಇದೇ ವೇಳೆ ಮಾತನಾಡಿದ ಹಟ್ಟಯ್ಯ ಅವರು, ಈ ಚುನಾವಣೆಯಲ್ಲಿ ನಮ್ಮ ಆರ್ ಪಿಐ ಪಕ್ಷದ ಚಿಹ್ನೆಯಾದ ಪೆನ್ನಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು.
ನಮ್ಮ ದೇಶಕ್ಕೆ ನಿರುದ್ಯೋಗ ಬಹುದೊಡ್ಡ ಸವಾಲಾಗಿದೆ, ಕೋಮು, ಜಾತಿ ಘರ್ಷಣೆ ತೀವ್ರಗೊಂಡಿವೆ, ಸ್ವಜನ ಪಕ್ಷಪಾತದ ದುರಾಡಳಿತ, ತೀವ್ರ ಭ್ರಷ್ಟಾಚಾರದಿಂದ ರಾಜಕಾರಣ ದಿವಾಳಿಯಾಗಿದೆ, ಜಾಗತಿಕ ಸಮೀಕ್ಷೆಯಂತೆ ಹಸಿವಿನಿಂದ ಭೀಕರ ಸಾವನ್ನಪ್ಪುವ 121 ದೇಶಗಳಲ್ಲಿ ಭಾರತ 107ನೇ ಸ್ಥಾನ ಪಡೆದಿದೆ ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿಯವರೆಗೂ, ಯಾವ ಪಕ್ಷವೂ ಮಾಡದ ಅಭಿವೃದ್ಧಿ ಕೆಲಸ ಮಾಡಲಾಗುವುದು, ನಮ್ಮ ಪಕ್ಷ ಜಿಲ್ಲೆಯಾದ್ಯಂತ 10 ಕ್ಷೇತ್ರಗಳಿಂದಲೂ ಸ್ಪರ್ಧಿಸಲಿದ್ದು, ಐದರಿಂದ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷರಾದ ಚಂದ್ರು, ತಾಲೂಕು ಉಪಾಧ್ಯಕ್ಷ ರವೀಶ, ತಾಲೂಕು ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಎಂ. ಸಿ., ಸದಸ್ಯರುಗಳಾದ ಕಿರಣ್ ಕುಮಾರ್, ಹೇಮಂತ್, ರಂಗಸ್ವಾಮಿ ಇನ್ನು ಅನೇಕರು ಉಪಸ್ಥಿತರಿದ್ದರು
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy