ತುಮಕೂರು: ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಕಾನೂನು ಪಾಲನೆ ಕುರಿತು ಮೊಬೈಲ್ ಕ್ಯಾಮೆರಾ ಸಹಾಯದಿಂದ ಕಿರುಚಿತ್ರ ತಯಾರಿಸಿ ಕಳುಹಿಸಲು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಕರು ತಂಬಾಕು ಸೇವನೆಗೆ ದಾಸರಾಗುತ್ತಿದ್ದು, ಯುವಜನರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಿರು ಚಿತ್ರಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಆಸಕ್ತರು ತಂಬಾಕು ದುಷ್ಪರಿಣಾಮ ಕುರಿತು ಕಿರುಚಿತ್ರಗಳನ್ನು ತಯಾರಿಸಿ ಇಲಾಖೆಯ ಇ–ಮೇಲ್ datctumkur@gmail.comಗೆ ಕಳುಹಿಸಬಹುದಾಗಿದೆ.
ಈ ಕಿರುಚಿತ್ರಗಳಿಗೆ ಇಲಾಖೆ ವತಿಯಿಂದ ಯಾವುದೇ ಸಂಭಾವನೆ/ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx