- ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ 2026ಕ್ಕೆ ಉದ್ಘಾಟನೆ
ಕೊರಟಗೆರೆ : ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ 160 ಕೋಟಿ ರೂ ವೆಚ್ಚದಲ್ಲಿ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಡಿ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಭರವಸೆಯಂತೆ ಮುಂದಿನ ವರ್ಷ ನಾವು ನೀವೆಲ್ಲರೂ ರಣಜಿ ಕ್ರಿಕೆಟ್ ಟೂರ್ನಿಯನ್ನು ವೀಕ್ಷಿಸಲಿದ್ದೇವೆ ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ 138ನೇ ಜಯಂತಿ ಪ್ರಯುಕ್ತ ಕೊರಟಗೆರೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಹಾಗೂ “ಪರಮೇಶ್ವರ್ ಕಪ್–2025” ಪಂದ್ಯಾವಳಿ ಸಮಾರಂಭ ಉದ್ದೇಶಿಸಿ ಮಾತನಾಡಿ, ತುಮಕೂರು ವಸಂತ ನರಸಾಪುರದ ಬಳಿ ಮುಂದಿನ ವರ್ಷ ಇಂಟನ್ರ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆಗೊಂಡು ರಣಜಿ ಸೇರಿದಂತೆ ಇನ್ನಿತರ ರಾಜ್ಯ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದರು.
ಕ್ರೀಡಾಪಟುವಾಗಿ ಕ್ರೀಡೆಗೆ ನಾನು ಮೊದಲಿನಿಂದಲೂ ಪ್ರೋತ್ಸಾಹ ಕೊಟ್ಟುಕೊಂಡು ಬಂದಿದ್ದೇನೆ, ನಾನು ಮೊದಲ ಬಾರಿಗೆ ಕೊರಟಗೆರೆ ಶಾಸಕರಾದ ಸಂದರ್ಭದಲ್ಲಿ ಜನತೆಗೆ ಭರವಸೆ ನೀಡಿದ್ದೆ, ಇಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನ ನಿರ್ಮಾಣ ಮಾಡುತ್ತೇನೆ ಎಂದು ಅದಕ್ಕೆ ಬದ್ಧರಾಗಿ ಈ ಮೈದಾನವನ್ನ ಸುಸಜ್ಜಿತ ಕ್ರೀಡಾ ಮೈದಾನವಾಗಿ ಮಾರ್ಪಡುವಂತಹ ಎಲ್ಲಾ ತರಹದ ಕಾರ್ಯ ಕೈಗೊಳ್ಳಲಾಗಿದೆ, ಇದೇ ವರ್ಷ ಜಿಲ್ಲಾ ಪಂಚಾಯಿತಿ ಸಿಇಒ 3.5 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮೇಲ್ದರ್ಜೆ ಏರಿಸುವ ಮೂಲಕ ಹೈಟೆಕ್ ಕ್ರೀಡಾ ಮೈದಾನವಾಗಲಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಬಹಳಷ್ಟು ಜನ ಕ್ರೀಡಾಪಟುಗಳಿದ್ದಾರೆ ಫುಟ್ಬಾಲ್ ನಲ್ಲಿದ್ದಾರೆ ಕಬಡ್ಡಿಯಲ್ಲಿದ್ದಾರೆ, ಕೊಕ್ಕೋದಲ್ಲಿದ್ದಾರೆ, ಕೊಕ್ಕೋದಲ್ಲಿ ಅನೇಕ ಸಂದರ್ಭದಲ್ಲಿ ಆಲ್ ಇಂಡಿಯಾ ಚಾಂಪಿಯನ್ ಹಾಗಿದ್ದರೆ, ನಮ್ಮ ಟೀಮ್, ಕ್ರಿಕೆಟ್ ಅನ್ನು ಕೂಡ ಶಾಲಾ ಕಾಲೇಜಿನಲ್ಲಿ ಇರುವಂತಹ ಪ್ರತಿಭೆಗಳನ್ನು ಗುರುತಿಸಿ ಅಂತಹ ಪ್ರತಿಭೆಗಳನ್ನು ಹೊರ ತರುವಂತಹ ಕಾರ್ಯ ಮುಂದಿನ ದಿನಗಳಲ್ಲಿ ಸಂಬಂಧಪಟ್ಟಂತ ಇಲಾಖೆ ಹಾಗೂ ಸಂಸ್ಥೆಗಳ ಸೇರಿದಂತೆ ಕ್ರೀಡಾ ಸಂಸ್ಥೆಗಳಿಂದ ಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಮುಖಂಡರಾದ ಅಶೋಕ ರಾಜು ವರ್ಧನ್, ಎಡಿ ಬಲರಾಮಯ್ಯ, ಮಹಾಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಪ.ಪಂ.ಸದಸ್ಯ ಕೆ.ಆರ್.ಓಬಳರಾಜ್ , ನಂದೀಶ್, ನಾಗರಾಜು, ಮಂಜುನಾಥ್ ಕ್ರಿಕೆಟ್ ಟೂರ್ನಮೆಂಟ್ ನ ಆಯೋಜಕರಾದ ನಂದೀಶ್, ಬೈರೇಶ್, ರಘುವೀರ್, ಶಿವು, ದೀಪಕ್ ಸೇರಿದಂತೆ ಇತರರು ಇದ್ದರು.
ಕರ್ನಾಟಕವನ್ನು ಮಾದಕ ವಸ್ತುಗಳ ಮುಕ್ತ ಮಾಡಲು ಹೊರಟಿದ್ದೇವೆ, ಶಾಲಾ ಕಾಲೇಜುಗಳಲ್ಲಿ ಯಾವುದೇ ರೀತಿ ಈ ತರಹದ ವಾತಾವರಣ ಕಂಡುಬಂದರೆ ಅಂತಹ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ಹೊರಬರಬೇಕಾದರೆ ಶಾಲಾ ಕಾಲೇಜಿನ ಮಕ್ಕಳು ಹೆಚ್ಚೆಚ್ಚು ಕ್ರೀಡಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜ ಸ್ವಸ್ಥದಿಂದ ಇರಲು ಸಾಧ್ಯ .
— ಡಾ.ಜಿ.ಪರಮೇಶ್ವರ, ಗೃಹ ಸಚಿವ, ಕರ್ನಾಟಕ ಸರ್ಕಾರ
ಆರ್.ಕೆ ಮೈಟಿ ಪ್ರಥಮ, ಅಶ್ವಮೇದ ದ್ವೀತಿಯ ಸ್ಥಾನ:
ಪರಮೇಶ್ವರ್ ಕಪ್–2025 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯು ಯಶಸ್ಸಿಯಾಗಿ ನಡೆದಿದ್ದು, 24 ತಂಡವು ಟೂರ್ನಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದು, ಇದರಲ್ಲಿ ಪ್ರಥಮ ಸ್ಥಾನ ಬೆಂಗಳೂರಿನ ಆರ್.ಕೆ.ಮೈಟಿ ತಂಡ 2.22.222.ರೂ ಮತ್ತು ಆಕರ್ಷಕ ಟ್ರೋಪಿಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದು, ದ್ವೀತಿಯ ಸ್ಥಾನ ತುಮಕೂರಿನ ಅಶ್ವಮೇಧ ತಂಡ 1.11.111ರೂ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದಿದೆ. ತೃತೀಯ ಸ್ಥಾನ ಉಡುಪಿ ಪಾಂಚಜನ್ಯ ಕೋಟ, ನಾಲ್ಕನೇ ಸ್ಥಾನ ಕುಣಿಗಲ್ ಕಿಂಬರ್ಲಿ ತಂಡ ಜಯಗಳಿಸಿದ್ದು, ಮ್ಯಾನ್ ಆಫ್ ದಿ ಸೀರಿಸ್ ಸ್ಯಾಂಡಿ ಟಿವಿಎಸ್ ರೈಡರ್ ಬೈಕ್‍ನ್ನು ಬೆಸ್ಟ್ ಬೌಲರ್ ಸಂದೀಪ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಸಿದ್ದು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ಬೈಕ್ ನ್ನು ತಮ್ಮದಾಗಿಸಿಕೊಂಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW