ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೂವೈಕುಂಠ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರ ತಿರುಮಲದಲ್ಲಿ ಮಹಿಳೆಯರು ಹೂ ಮುಡಿಯಬಾರದು ಎಂಬ ನಿಯಮವಿದೆ ಗೊತ್ತಾ?
ಶ್ರೀಹರಿಯನ್ನು ಹೂವಿನ ಪ್ರೇಮಿ ಎಂದೂ ಕರೆಯುವುದುಂಟು. ಪುರಾಣಗಳಲ್ಲಿ ತಿರುಮಲವನ್ನು ಹೂವಿನ ಮಂಟಪ ಎಂದೇ ಹೆಸರಿಸಲಾಗಿದೆ. ತಿರುಮಲ ಹೂವಿನ ಮಂಟಪವಾಗಿರುವುದರಿಂದ ಶ್ರೀಹರಿಯು ಹೂವಿನ ಅಲಂಕಾರ ಪ್ರಿಯನಾಗಿರುವುದರಿಂದ ನಿತ್ಯವೂ ಭಗವಂತನಿಗೆ ಟನ್ ಗಟ್ಟಲೆ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ.
ಬ್ರಹ್ಮೋತ್ಸವದ ಸಂದರ್ಭದಲ್ಲಿ ಗೋವಿಂದ ನೂರಾರು ಅಲಂಕಾರಗಳಲ್ಲಿ ಭಕ್ತರನ್ನು ಪುಳಕಿತಗೊಳಿಸುತ್ತಾನೆ. ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂವು ಶ್ರೀ ಮನ್ನಾರಾಯಣನಿಗೆ ಸಮರ್ಪಿತವಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಗವಂತನ ದರ್ಶನಕ್ಕೆ ಬರುವ ಯಾವುದೇ ಭಕ್ತರಾಗಲಿ ಹೂವುಗಳನ್ನು ಮುಟ್ಟಬಾರದು ಎಂಬ ನಿಯಮ ಆಚರಣೆಯಲ್ಲಿದೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ Tirumala Tirupati Devasthanam -TTD) ಆಡಳಿತ ಮಂಡಲಿಯು ಇದನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಈ ಕಾರಣದಿಂದಲೇ ಸ್ವಾಮಿಯ ದರ್ಶನಕ್ಕೆ ಬರುವ ಮಹಿಳೆಯರು ತಲೆಯಲ್ಲಿ ಹೂ ಮುಡಿಯುವುದಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA