ಬೆಂಗಳೂರು: ಕರ್ನಾಟಕ ರಾಜ್ಯದ ಜನಪ್ರಿಯ ಯೋಜನೆಯಾದ ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಪರಿಚಯಿಸಿರುವುದು ಆ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು.
ಈ ಯೋಜನೆಯ ಹಿಂದೆ ಹಸಿವು ನೀಗಿಸುವ ಉದ್ದೇಶ ಇತ್ತು. ಆದರೆ ಈ ಯೋಜನೆಯನ್ನ ಎಸ್.ಎಂ.ಕೃಷ್ಣ ಅವರು ಜಾರಿಗೆ ತಂದಿರುವುರು ಏಕೆ ಎನ್ನುವುದನ್ನು ತಮ್ಮ ಆತ್ಮಕಥೆ ಸ್ಮೃತಿ ವಾಹಿನಿಯಲ್ಲಿ ತೆರೆದಿಟ್ಟಿದ್ದಾರೆ.
ಉತ್ತರ ಕನ್ನಡ ಪ್ರವಾಸದ ವೇಳೆ, ನನ್ನ ಜೊತೆಗೆ ಒಂದಿಬ್ಬರು ಮಿತ್ರರು ಇದ್ದರು. ಸಂಜೆ ಇಳಿಹೊತ್ತು ಶಾಲೆಯಿಂದ ಹೆಣ್ಣುಮಕ್ಕಳು ನಡೆದುಕೊಂಡು ಬರುತ್ತಿದ್ದರು. ಅವರನ್ನು ನಿಲ್ಲಿಸಿ ಅವರು ಮನೆಬಿಟ್ಟ ಸಮಯ ಹಾಗೂ ಶಾಲೆಯಲ್ಲಿ ಏನಾದರೂ ತಿನ್ನಲಿಕ್ಕೆ ಕೊಟ್ಟರಾ, ನೀವು ಎಷ್ಟೊತ್ತಿಗೆ ಮನೆಗೆ ಹೋಗುತ್ತೀರಾ ಮುಂತಾದ ವಿಷಯಗಳನ್ನು ವಿಚಾರಿಸಿಕೊಂಡೆ. ಬೆಳಿಗ್ಗೆ ಒಂದಿಷ್ಟು ಊಟ ಮಾಡಿದ ಮಕ್ಕಳು ಸಂಜೆ 6 ಗಂಟೆಯ ತನಕ ಹಸಿದಿರಬೇಕಾಗುತ್ತದೆ. ಹಸಿದ ಮಕ್ಕಳಿಗೆ ವಿದ್ಯೆಯ ಜೊತೆಗೆ ಹೊಟ್ಟೆಗೂ ಸಮಜಾಯಿಶಿ ಹೇಳಬೇಕೆಂಬುದು ನನ್ನ ಕನಸಾಗಿತ್ತು ಎಂದು ಎಸ್.ಎಂ.ಕೃಷ್ಣ ತಮ್ಮ ಆತ್ಮಕಥೆಯಲ್ಲಿ ತಿಳಿಸಿದ್ದಾರೆ.
ಹಿಂದೆ ಅಂಥ ಪ್ರಯತ್ನಗಳು ನಡೆದು ವಿಫಲವಾಗಿದ್ದವು. ಅಕ್ಷರ ದಾಸೋಹ ಕಾರ‍್ಯಕ್ರಮದ ಹೊರೆ ಹೊರಲು ಕಷ್ಟ ಎಂದು ಆರ್ಥಿಕ ಇಲಾಖೆ ಹೇಳಿತು. ಕೊನೆಗೆ ಶಿಕ್ಷಣ ಇಲಾಖೆಗೆ ಸಾಕಷ್ಟು ಸಂಪನ್ಮೂಲ ಒದಗಿಸಿ ಅಕ್ಷರ ದಾಸೋಹ ಕಾರ‍್ಯಕ್ರಮ ಆರಂಭಿಸಿದೆ’ ಎಂದು ಎಸ್.ಎಂ. ಕೃಷ್ಣ ಸ್ಮೃತಿ ವಾಹಿನಿಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx