ಸರಗೂರು: ಸರಗೂರು ನೂತನ ತಾಲೂಕು ಆಗಿ 10 ವರ್ಷಗಳ ಕಾಲ ಕಳೆಯುತ್ತಾ ಬಂದಿದೆ. ಜನಸಂಖ್ಯೆ ಆಧಾರಕ್ಕೆ ಅನುಗುಣವಾಗಿ ಪಟ್ಟಣ ಪಂಚಾಯಿತಿಯಿಂದ ಸರಗೂರು ಪುರಸಭೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಎಸ್.ಎನ್. ನಾಗರಾಜು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್.ಸಿ.ಮಹದೇವಪ್ಪ ನಿಮ್ಮ ಅವಧಿಯಲ್ಲಿ ತಾಲೂಕು ಘೋಷಣೆ ಮಾಡಿದ್ದೀರಿ. ಅದರಂತೆ ಈಗ ಸರಗೂರು ಪುರಸಭೆ ಎಂದು ಘೋಷಣೆ ಮಾಡಿ ಎಂದು ಅವರು ಮನವಿ ಮಾಡಿದರಲ್ಲೇ , ಪುರಸಭೆ ಘೋಷಣೆ ಮಾಡಿದರೆ ಕಾಂಗ್ರೇಸ್ ಸರ್ಕಾರ ಹೆಸರು ಹಾಗೂ ನಿಮ್ಮ ಹೆಸರು ಎಲ್ಲರ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದರು.
ಈ ವಿಚಾರದ ಬಗ್ಗೆ ಶಾಸಕರಾದ ಅನೀಲ್ ಚಿಕ್ಕಮಾದುರವರು ಚಳಿಗಾಲ ಅಧಿವೇಶನದಲ್ಲಿ ಮಾತನಾಡುತ್ತಾರೆ ಎಂದು ವಿಶ್ವಾಸ ಮತ್ತು ನಂಬಿಕೆ ಇದೆ ಎಂದರು.
ಪಟ್ಟಣ ಪಂಚಾಯಿತಿಯಲ್ಲಿ 12 ವಾರ್ಡ್ ಗಳು ಇದ್ದು, ಪಟ್ಟಣ ಜನಸಂಖ್ಯೆ 15 ರಿಂದ 20 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಇತ್ತೀಚೆಗೆ ಪಟ್ಟಣ ಅಂಗಡಿ ಮುಂಗಟ್ಟುಗಳ ಹಾಗೂ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಪಟ್ಟಣ ಪಕ್ಕದಲ್ಲೇ ಕೋತ್ತೇಗಾಲ, ಹಂಚೀಪುರ ಗ್ರಾಮ ಪಂಚಾಯಿತಿಗಳು ಇದ್ದು, ಆ ಗ್ರಾಮಗಳನ್ನು ಪಟ್ಟಣ ಪಂಚಾಯಿತಿಗೆ ಒಳಗೊಂಡರೆ ಪುರಸಭೆ ಮಾಡಬಹುದು ಎಂದು ಅವರು ಹೇಳಿದರು.
ಕಳೆದ 8 ವರ್ಷ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿ ಮಾಜಿ ಸಂಸದ ಆರ್.ಧ್ರುವನಾರಾಯಣ್, ದಿ ಮಾಜಿ ಶಾಸಕ ಎಸ್.ಚಿಕ್ಕಮಾದುರವರು 2015 ರಿಂದ 2016 ಸಾಲಿನಲ್ಲಿ ನೂತನ ತಾಲೂಕು ಎಂದು ಘೋಷಣೆ ಮಾಡಿದ್ದರು. ಪಟ್ಟಣ ಅಭಿವೃದ್ಧಿ ಜೊತೆಯಲ್ಲಿ ದೊಡ್ಡದಾಗಿ ಬೆಳೆಯುವುದರಿಂದ ಶಾಸಕ ಅನಿಲ್ ಚಿಕ್ಕಮಾದುರವರು ಸರಗೂರು ತಾಲೂಕಿನ ಬಗ್ಗೆ ಹೆಚ್ಚು ಗಮನ ಕೊಡುವುದರಿಂದ ಎಲ್ಲಾ ಕಚೇರಿಗಳು ಒಂದು ಒಂದಾಗಿ ಪಟ್ಟಣಕ್ಕೆ ಬರುತ್ತಿದ್ದೇವೆ. ಪಟ್ಟಣ ಪಂಚಾಯಿತಿ ದೊಡ್ಡದಾಗಿ ಬೆಳೆಯುತ್ತಾ ಬರುತ್ತಿದೆ. ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯಾಗಿ ಬರುತ್ತಿದ್ದು, ನಂತರ ಮತ್ತೆ ಪಟ್ಟಣ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತದೆ.ಇನ್ನೂ ಅಭಿವೃದ್ಧಿ ಕೆಲಸವನ್ನು ಶಾಸಕರು ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ತಾಲೂಕಿನ ಕಡೆಗೆ ಗಮನ ಕೊಟ್ಟು ಪಟ್ಟಣ ಪಂಚಾಯಿತಿಯಿಂದ ಪುರಸಭೆಯನ್ನು ಮಾಡುತ್ತಾರೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ ಎಂದು ತಾಲೂಕಿನ ಪ್ರಗತಿಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಒತ್ತಾಯಿಸಿದರು.
ವರದಿ: ಹಾದನೂರು ಚಂದ್ರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q