ಕೇರಳ: ಶಬರಿಮಲೆ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ಪ್ರಜ್ವಲಿಸಿತು. ಸಂಜೆ 6:45ಕ್ಕೆ ದೀಪಾರಾಧನೆ ನಡೆಸಿದ ಸ್ವಲ್ಪ ಹೊತ್ತಿನಲ್ಲಿ ಮಕರಜ್ಯೋತಿ ಕಾಣಿಸಿಕೊಂಡಿದೆ.
6.47ರ ಹೊತ್ತಿಗೆ ಮೊದಲ ಜ್ಯೋತಿ ಕಾಣಿಸಿಕೊಂಡಿದ್ದು, ಸೆಕೆಂಡುಗಳ ನಂತರ ಮತ್ತೆ ಎರಡು ಬಾರಿ ಪ್ರಜ್ವಲಿಸಿತು. ಲಕ್ಷಾಂತರ ಭಕ್ತರು ಮಕರಜ್ಯೋತಿ ವೀಕ್ಷಿಸಿದರು.
ಮಕರಜ್ಯೋತಿ ವೀಕ್ಷಣೆಗೆ ಶಬರಿಮಲೆ ಆಸುಪಾಸಿನ ಹಲವು ಕೇಂದ್ರಗಳಲ್ಲಿ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷಕ್ಕೂ ಅಧಿಕ ಅಯ್ಯಪ್ಪ ಭಕ್ತರು ಮಕರ ಜ್ಯೋತಿ ದರ್ಶನ ಪಡೆದುಕೊಂಡರು.
ಶಬರಿ ಮಲೆಯ ವಿವಿಧ ಪ್ರದೇಶಗಳಲ್ಲಿ ಮಕರ ಜ್ಯೋತಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಜ್ಯೋತಿ ದರ್ಶನದ ವೇಳೆ ಭಕ್ತರು ಅಯ್ಯಪ್ಪ ಸ್ವಾಮಿಯ ಘೋಷವಾಕ್ಯ ಕೂಗಿ ಸಂಭ್ರಮಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx