ತುಮಕೂರು: ಹಾಸನ ಮಂಡ್ಯದ ಜೊತೆಗೆ ತುಮಕೂರು ಗ್ರಾಮಾಂತರ ಕ್ಷೇತ್ರವನ್ನ ಮುಂದಿನ ಚುನಾವಣಾ ಭವಿಷ್ಯದ ಹಿತ ದೃಷ್ಟಿಯಿಂದ. ಒಬ್ಬೊಬ್ಬ ಸಚಿವರಿಗೆ ಒಂದೊಂದು ಕ್ಷೇತ್ರವನ್ನ ಕೊಟ್ಟಿದೆ. ನಾನು ಸಂತೋಷದಿಂದ ಈ ಕ್ಷೇತ್ರ ಮತ್ತು ಕುಣಿಗಲ್ ಕ್ಷೇತ್ರವನ್ನ ಕೊಡ್ಬೇಕು ಅಂತ ಕೇಳ್ದೆ. ಪಕ್ಷದ ಅಧ್ಯಕ್ಷರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಸಚಿವ ಗೋಪಾಲಯ್ಯ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಾಜಿ ಶಾಸಕರು ನನ್ನ ಸ್ನೇಹಿತರು ಸುರೇಶ್ ಗೌಡ, ಈಗ ನಮ್ಮ ಎಲ್ಲಾ ಕಾರ್ಯಕರ್ತರ ಜೊತೆ ಸಭೆ ಮಾಡ್ಬೇಕು ಅಂತ ಬಂದಿದಿನಿ. ಈ ಕ್ಷೇತ್ರ ನನ್ನ ತಾಯಿ ಹುಟ್ಟೂರು, ಈ ಭಾಗದಲ್ಲಿ ಬಹಳಷ್ಟು ನನ್ನ ಸಂಬಂಧಿಕರು ಇದ್ದಾರೆ. ಸುರೇಶ್ ಗೌಡ ಶಾಸಕರಾಗಿದ್ದಂತಹ ಕಾಲದಲ್ಲಿ ಈ ಕ್ಷೇತ್ರ ಅಭಿವೃದ್ಧಿಯಾಗಿದೆ. ಯಡಿಯೂರಪ್ಪ ನವರು ಸಿಎಂ ಆಗಿದ್ದಾಗ ಅತಿ ಹೆಚ್ಚು ಅನುದಾನ ತಂದು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ಇವರು ಗೆದ್ದಿದ್ರೆ ಬಹಳಷ್ಟು ಅಭಿವೃದ್ಧಿಯಾಗ್ತಿತ್ತು. ಕಾರಣಾಂತರಗಳಿಂದ ಕಳೆದ ಬಾರಿ ಸೋತಿದ್ದಾರೆ. ಮುಂದೆ ಬರುವ ಚುನಾವಣೆಯಲ್ಲಿ. ಪಕ್ಷ ಏನು ನಿರ್ದೇಶನವನ್ನ ಇಟ್ಕೊಂಡಿದೆ. ಗೆಲ್ಲಿಸಿಕೊಂಡು ಬರ್ಬೇಕು ಎಂಬ ವಿಶ್ವಾಸ ಇಟ್ಟಿದೆ. ಅಧ್ಯಕ್ಷರು ಹಾಗೂ ಸಿಎಂ ಒಂದು ಸೂಚನೆಯಂತೆ ಸವಾಲು ಸ್ವೀಕಾರ ಮಾಡಿ ಪಕ್ಷವನ್ನ ಗೆಲ್ಲಿಸಿಕೊಂಡು ಬರುವ ಭರವಸೆ ಇದೆ ಎಂದರು.
ಪ್ರತಿ 10 ದಿನಕ್ಕೊಮ್ಮೆ ಕ್ಷೇತ್ರಕ್ಕೆ ಬಂದು ಕಾರ್ಯಕರ್ತರ ಜೊತೆ ಸಭೆ ನಡೆಸಿ. ಪಕ್ಷ ಸಂಘಟನೆ ಮಾಡಿ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಬಹುಮತಗಳಲ್ಲಿ ಪಕ್ಷವನ್ನ ಗೆಲ್ಲಿಸುವ ಕೆಲಸವನ್ನ ನಾವೆಲ್ಲಾ ಸೇರಿ ಮಾಡ್ತೆವೆ ಎಂದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz