ಸರಗೂರು: ತಾಲ್ಲೂಕಿನ ಸಾಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜೆಡಿಎಸ್ ಬೆಂಬಲಿತ ನೂತನ ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು ಹಾಗೂ ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ಪ್ರಮೋದ್ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ರತ್ನಮ್ಮ ಶಿವರಾಜು ಹಾಗೂ ಉಪಾಧ್ಯಕ್ಷ ಮಾತನಾಡಿ, ನಾನು ರೈತನ ಮಗನು ನನಗೆ ರೈತರ ಕಷ್ಟ ತಿಳಿದಿದೆ, ಹಾಗಾಗಿ ರೈತರಿಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತೇನೆ. ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ. ಸಹಕಾರ ಸಂಘದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದರು.
ಸೊಸೈಟಿಯ ಒಟ್ಟು 12 ಸದಸ್ಯರ ಪೈಕಿ 11 ಮಂದಿ ಒಳಗೊಂಡು ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಗರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ರತ್ನಮ್ಮ ಶಿವರಾಜು ರವರು ಆಯ್ಕೆಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬರುವ ಜಿಪಂ ಹಾಗೂ ತಾಪಂ ಚುನಾವಣೆಗೆ ದಿಕ್ಸೂಚಿಯಾಗಿದೆ. ಸಹಕಾರ ಸಂಘಕ್ಕೆ 5 ರಿಂದ 7 ಗ್ರಾಮಗಳು ಬರುತ್ತಿದ್ದೇವೆ. ಈ ಸರ್ಕಾರದ ಮೇಲೆ ಜನರಲ್ಲಿ ನಂಬಿಕೆ ಇಲ್ಲದಂತೆಯಾಗಿದೆ. ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಲು ಗ್ರಾಮದ ಮಟ್ಟದಲ್ಲಿ ಸಂಘಟನೆ ಮಾಡಿಕೊಂಡು ಬರುತ್ತಿದ್ದೇವೆ. ಇದರಿಂದ ವರ್ಷದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
– ಕೃಷ್ಣನಾಯಕ, ಜೆಡಿಎಸ್ ಪಕ್ಷದ ಮುಖಂಡ.
ನಿರ್ದೇಶಕರಾದ ಟಿ. ಜಯರಾಮ, ಕೃಷ್ಣೇಗೌಡ, ಮಹದೇವಗೌಡ, ಜಯರಾಮೇಗೌಡ, ರವಿಚಾರಿ, ನಿಂಗರಾಜೇಗೌಡ, ಪುಷ್ಪಾವತಿಮೂರ್ತಿ, ಜವರನಾಯಕ, ಸುರೇಂದ್ರ, ಮುಖಂಡರಾದ ಶಂಕರ್ ಸಾಗರೆ, ಎಸ್.ಎಸ್.ಸ್ವಾಮಿ, ಬಸವೇಗೌಡ, ಈರನಾಯಕ, ಗೋವಿಂದನಾಯಕ, ಮಹದೇವಗೌಡ, ರಾಜೇಶ್, ಮಹಾದೇವಯ್ಯ, ಸೋಮೇಶ್, ನಾಗರಾಜು, ಎಸ್.ಟಿ.ಮೂರ್ತಿ, ಜಯರಾಮ್, ಮಹಾದೇವಯ್ಯ, ಸಿಬಂದಿಗಳಾದ ಶಿವಪ್ಪ, ಶಿವಲಿಂಗ ಇನ್ನೂ ಗ್ರಾಮದ ಮುಖಂಡರು ಸೇರಿದಂತೆ ಹಾಜರಿದ್ದರು. ಒಬ್ಬರು ಗೈರು ಹಾಜರಾಗಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


