nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026
    Facebook Twitter Instagram
    ಟ್ರೆಂಡಿಂಗ್
    • ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ
    • ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ
    • ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು
    • ತುಮಕೂರು ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಆಕ್ರೋಶ: ‘ನಾಯಕರಿಂದಲೇ ಚುನಾವಣೆ ಗೆಲ್ಲಿಸಿಕೊಳ್ಳಿ’ ಎಂದು ಕಾರ್ಯಕರ್ತರ ಸವಾಲು
    • ಜೀತಕಾರ್ಮಿಕ ಪದ್ಧತಿ ನಿರ್ಮುಲನಾ ದಿನಾಚರಣೆ ದಿನಾಂಕ ಬದಲಿಸಲು ಒತ್ತಾಯ
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    • ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
    ಚಿಕ್ಕನಾಯಕನಹಳ್ಳಿ December 25, 2021

    ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

    By adminDecember 25, 2021No Comments2 Mins Read
    maha sabhe

    namma tumakuru

    ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ನಗರದಲ್ಲಿ, ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.


    Provided by
    Provided by

    ಈ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು.  ಈ ಮಹಾಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿಗಳಾದ ಮಹಾಂತೇಶ್ ರವರು ವಹಿಸಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಶಿವಣ್ಣ, ನಾವು  ಸೊಸೈಟಿಯನ್ನು 2009 ರಲ್ಲಿ ಪ್ರಾರಂಭಿಸಿ, ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದಿದ್ದೇವೆ. ಇದೇ ರೀತಿ ಇನ್ನು ಮುಂದೆಯೂ ಕೂಡ, ಮುಂದೆ ಆಯ್ಕೆಯಾಗುವ ಕಾರ್ಯಕಾರಿ ಮಂಡಳಿಯೂ ಸಹ ಯಾವುದೇ ಲೋಪ ದೋಷಗಳನ್ನು ತರದಂತೆ, ನಮ್ಮ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು, ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡು ಹೋಗಬೇಕೆಂದು ಹೇಳಿದರು.

    ಇಡೀ ಸಂದರ್ಭದಲ್ಲಿ ಕಾತ್ರಿಕೇಹಾಲ್ ಗೋವಿಂದರಾಜು ಮಾತನಾಡಿ, ನಾವು ಇನ್ನು ಮುಂದೆ ಈ ಸೊಸೈಟಿಯನ್ನು, ನಮ್ಮ ಜಿಲ್ಲೆಯಲ್ಲಿಯೇ ಒಂದು ಮಾದರಿ ಪತ್ತಿನ ಸಹಕಾರ ಸಂಘವನ್ನಾಗೀ ಮಾಡುವತ್ತ, ಎಲ್ಲಾ ನಿರ್ದೇಶಕರುಗಳು ಪಣತೊಟ್ಟು ಕೆಲಸ ಮಾಡಬೇಕೆಂದು ಕರೆ ನೀಡಿದರು.

    ಕಂಟಲಗೆರೆ ನಂಜುಂಡಯ್ಯನವರು ಮಾತನಾಡಿ, ಸಂಘದ ಬೆಳವಣಿಗೆಯ ಕುಂಠಿತವಾಗುವುದು, ಹೆಚ್ಚು ಖರ್ಚು ವೆಚ್ಚಗಳು. ಹಾಗಾಗಿ ನಾವು ನಾವು ಖರ್ಚು ವೆಚ್ಚಗಳನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡಿ, ಆದಾಯವನ್ನು ಹೆಚ್ಚಿಸುವುದರ ಬಗ್ಗೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಸಂಘವನ್ನು ಚೆನ್ನಾಗಿ ಬೆಳೆಸಬಹುದು ಎಂದು ಸಲಹೆ ನೀಡಿದರು.

    ಹಾಗೆಯೇ ಮಾಜಿ ನಿರ್ದೇಶಕರಾದ ತರಬೇನಹಳ್ಳಿ ಚಿದಾನಂದಮೂರ್ತಿ ಮಾತನಾಡಿ, ನಾವು ಸಾಲ ವಸೂಲಾತಿಯನ್ನು ಕಟ್ಟುನಿಟ್ಟಿನ ಕ್ರಮಗಳನ್ನು ಮೂಲಕ ವಸೂಲು ಮಾಡಿ ಸಂಘದ ಶೇರುದಾರರಿಗೆ, ಲಾಭಾಂಶವನ್ನು ನೀಡುವುದರ ಜೊತೆಜೊತೆಗೆ ಮಾದಿಗ ಸಮಾಜದ ಅಭಿವೃದ್ದಿಗೆ ಅನುಕೂಲಕರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕವಾಗಿದೆ ಎಂದು ವಿವರಿಸಿದರು.

    ಬಾಬು ಜಗಜೀವನರಾಂ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ, ಶಿವಣ್ಣ, ಅಶೋಕ್, ಮಾಜಿ ನಿರ್ದೇಶಕರುಗಳಾದ ನರಸಿಂಹಯ್ಯ, ತರಬೇನಹಳ್ಳಿ  ಚಿದಾನಂದ ಮೂರ್ತಿ, ಕಾತ್ರಿಕೇಹಾಲ್ ಗೋವಿಂದರಾಜು, ಹನುಮಯ್ಯ, ಗಂಗಾಧರಯ್ಯ, ಮಾಜಿ ಪುರಸಭಾ ಸದಸ್ಯರಾದ ಶಿವಕುಮಾರ್, ಕಂಟಲಗೆರೆ ನಂಜುಂಡಯ್ಯ,  ಶ್ರೀನಿವಾಸ್, ಕಾರ್ಯದರ್ಶಿ ಮಂಜುಳಾ, ಕೆ ಇ ಬಿ ಶಿವಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಲಕ್ಷ್ಮಣ್, ಚಂದ್ರಯ್ಯ, ಪಂಕಜನಹಳ್ಳಿ  ರಂಗಸ್ವಾಮಿ, ಬಲ್ಲೇನಹಳ್ಳಿ ಚನ್ನಕೇಶವ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಷೇರುದಾರರು ಭಾಗವಹಿಸಿದರು.

    ವರದಿ: ಚಿದಾನಂದಮೂರ್ತಿ ತರಬೇನ ಹಳ್ಳಿ

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    4 ವರ್ಷದ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ ಅಂಗನವಾಡಿ ಶಿಕ್ಷಕಿ!

    January 31, 2026

    ಮಹಿಳೆಯರನ್ನು ಸೆಳೆಯಲು ವಿಭಿನ್ನ ಕಾರ್ಯಕ್ರಮ ಆಯೋಜಿಸಲು ಕೆಆರ್‌ ಎಸ್ ಪಕ್ಷ ತೀರ್ಮಾನ

    January 5, 2026

    ಜ.4ರಂದು ಎತ್ತಿನಹೊಳೆಗೆ ಕೇಂದ್ರ ಅಡ್ಡಿ ವಿರುದ್ಧ ಸಭೆ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ

    January 2, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಹೈಕಮಾಂಡ್ ಸುಮ್ಮನೆ ಇದ್ರೆ ನಾವೇನು ಅರ್ಥ ಮಾಡಿಕೊಳ್ಳೋದು?” :  ಸಿಎಂ ಬದಲಾವಣೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ

    February 8, 2026

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ ಬದಲಾವಣೆ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ಗೃಹ ಸಚಿವ ಡಾ. ಜಿ.…

    ಸಿದ್ಧರಾಮಯ್ಯ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 8, 2026

    ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ: ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

    February 8, 2026

    ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

    February 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.