ಪಂಜಾಬ್ ನ ಅಮೃತಸರದ ಖಾಸಾ ಬಿಎಸ್‌ಎಫ್ ಪ್ರದೇಶದಲ್ಲಿ ಭಾನುವಾರ (ಮಾರ್ಚ್ 6) ನಡೆದ ಘಟನೆಯಲ್ಲಿ ಐವರು ಗಡಿ ಭದ್ರತಾ ಪಡೆ (BSF) ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ.ಬಿಎಸ್‌ಎಫ್ ಜವಾನ ಸತ್ತೆಪ್ಪ (Ct Satteppa S K) ಎಂಬುವವವರು ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಐವರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದ ಸತ್ತೆಪ್ಪ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.
6 ಯೋಧರ ಮೇಲೆ ಗುಂಡಿನ ದಾಳಿ:
ಅಮೃತಸರದ (Amritsar) ಬಿಎಸ್‌ಎಫ್ ಶಿಬಿರದಲ್ಲಿ ಸಿಬ್ಬಂದಿ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಗುಂಡಿನ ದಾಳಿಯಿಂದ ಗಾಯಗೊಂಡ ಯೋಧರನ್ನು ಗುರುನಾನಕ್ ದೇವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಯಲ್ಲಿ 6 ಯೋಧರು ಗುಂಡು ಹಾರಿಸಿದ್ದು, ಈ ಪೈಕಿ 5 ಮಂದಿ ಸಾವನ್ನಪ್ಪಿದ್ದಾರೆ.ಬಿಎಸ್‌ಎಫ್ ಜವಾನ ಗುಂಡಿನ ದಾಳಿ ನಡೆಸಿದ್ದು ಏಕೆ?
ಬಿಎಸ್‌ಎಫ್ ಯೋಧರ ಗುಂಡಿನ ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಅಟ್ಟಾರಿ-ವಾಘಾ ಗಡಿಯ (Attari-Wagah border) ಸುಮಾರು 20 ಕಿಮೀ ದೂರದಲ್ಲಿರುವ ಖಾಸಾ ಪ್ರದೇಶದ ಬಿಎಸ್‌ಎಫ್ ಶಿಬಿರದ ಕೆಫೆಟೇರಿಯಾದಲ್ಲಿ ಈ ಘಟನೆ ನಡೆದಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB