ಬೆಂಗಳೂರು: ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹೆಚ್ಎಂ ಟ್ರೇಡರ್ಸ್ ಅಂಗಡಿ ಮೇಲೆ ಸಿಸಿಬಿ ದಾಳಿ ಮಾಡಿದ ಘಟನೆ ವಿಲ್ಸನ್ ಗಾರ್ಡನ್ ಸಮೀಪದ ಸೋಮೇಶ್ವರನಗರದಲ್ಲಿ ನಡೆದಿದೆ.
ಪ್ರತಿಷ್ಠಿತ ಬ್ರಾಂಡ್ ನ ಆಹಾರ ಪದಾರ್ಥಗಳು ಎಕ್ಸ್ ಪೆರಿ ಆಗಿದ್ದರೂ ಮಾರಾಟ ಮಾಡಲಾಗುತ್ತಿತ್ತು. ಬಿಸ್ಕತ್, ಮಿಕ್ಸ್ ಚರ್ ಹಾಗೂ ಸ್ವೀಟ್ಸ್ ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ಮಾಲೀಕರು ಸೇಲ್ ಮಾಡುತ್ತಿದ್ದ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಏಕಾಏಕಿ ದಾಳಿ ಮಾಡಿದ್ದಾರೆ.


