ತುಮಕೂರು: ಗ್ರಾಮಾಂತರ ತಾಲ್ಲೂಕು ವ್ಯಾಪ್ತಿ ಬೆಳಗುಂಬ ಗ್ರಾಮದಲ್ಲಿ ಜನವರಿ 14 ರಿಂದ 16ರವರೆಗೆ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಯಂತಿ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಕೆಲವು ಕಿಡಿಗೇಡಿಗಳು ಭಂಗತರುವಂತಹ ಸಾಧ್ಯತೆ ಇರುವುದರಿಂದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಜನವರಿ 14ರ ಬೆಳಿಗ್ಗೆ 6 ರಿಂದ 16ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಿಷೇಧಾವಧಿಯಲ್ಲಿ ಬೆಳಗುಂಬ ಗ್ರಾಮದಲ್ಲಿರುವ ಲಿಕ್ಕರ್ ಮಾರ್ಟ್, ಸಿಎಲ್–2 ಸನ್ನದನ್ನು ಮುಚ್ಚಲು ಸೂಚನೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx