ಅಮೆರಿಕದ ಸೆನೆಟ್‌ನಲ್ಲಿ ಮಂಗಳವಾರ ಸಲಿಂಗ ವಿವಾಹದ ಫೆಡರಲ್ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ.
2015ರಲ್ಲೇ ಸಲಿಂಗ ವಿವಾಹವನ್ನು ಅಮೆರಿಕದಲ್ಲಿ ಕಾನೂನುಬದ್ಧಗೊಳಿಸಲಾಗಿದ್ದು, ಇದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಮಸೂದೆ ಜಾರಿ ಮಾಡಲಾಗಿದೆ.
ಇಂದು ಒಂದು ದೊಡ್ಡ ಸಮಾನತೆಯ ಎಡೆಗೆ ಮಹತ್ವದ ಹೆಜ್ಜೆ ಇಡಲಾಗಿದೆಎಂದು ಸೆನೆಟ್ ನಾಯಕ ಚುಕ್ ಶೂಮರ್ ಹೇಳಿದ್ದಾರೆ.ಈ ಮಸೂದೆ ಅಂಗೀಕರಿಸುವ ಮೂಲಕ ಅಮೆರಿಕದ ಎಲ್ಲ ನಾಗರಿಕರ ಧ್ವನಿಯನ್ನು ಆಲಿಸಬೇಕು ಎಂಬ ಸಂದೇಶ ನೀಡಿದೆ. ನೀವು ಯಾರೇ ಆಗಿರಲಿ, ಯಾರನ್ನೇ ಪ್ರೀತಿಸುತ್ತಿರಲಿ, ಕಾನೂನಿನ ಅಡಿಯಲ್ಲಿ ನೀವು ಘನತೆ ಮತ್ತು ಸಮಾನತೆಗೆ ಅರ್ಹರು ಎಂದು ಹೇಳಿದ್ದಾರೆ.
ಮಸೂದೆಯ ಪರ 61 ಮತಗಳು ಮತ್ತು ವಿರುದ್ಧವಾಗಿ 36 ಮತಗಳು ಬಿದ್ದಿದ್ದವು. ಡೆಮಾಕ್ರಟಿಕ್‌ನ 49 ಮತ್ತು ರಿಪಬ್ಲಿಕ್ ಪಕ್ಷದ 12 ಮಂದಿ ಮಸೂದೆ ಪರ ಮತ ಹಾಕಿದ್ದರು. ಡೆಮಾಕ್ರಟಿಕ್ ಪಕ್ಷದ ಒಬ್ಬರು ಮತ್ತು ರಿಪಬ್ಲಿಕ್ ಪಕ್ಷದ ಇಬ್ಬರು ಸಭೆಗೆ ಹಾಜರಾಗಿರಲಿಲ್ಲ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy